ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ














ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ, ಪ್ರಭು ಬುಕ್ ಸ್ಟಾಲ್ ಎದುರಿನ ಕೆ.ಆರ್. ಕಾಂಪ್ಲೆಕ್ಸ್ನ ಮೊದಲನೇ ಮಹಡಿಯಲ್ಲಿರುವ 5ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ತಜ್ಞ ವೈದ್ಯರಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ ನಡೆಯಲಿದೆ.

ನುರಿತ ಆಪ್ಟೋಮೆಟ್ರಿಸ್ಟ್ನಿಂದ ಸೇವೆ: 2021ರಲ್ಲಿ ಪ್ರಾರಂಭವಾದ ಈ ಸಂಸ್ಥೆಯನ್ನು ದಂಪತಿಗಳಾದ ಶ್ರೀಮತಿ ಅಖಿಲಾ ಕೆ. ಹಾಗೂ ಶಶಿಕಿರಣ್ ಆನೆಕಾರ್ ಅವರು ಮುನ್ನಡೆಸುತ್ತಿದ್ದಾರೆ. ನುರಿತ ‘ಆಪ್ಟೋಮೆಟ್ರಿಸ್ಟ್’ (Optometrist) ಆಗಿ ಸೇವೆ ಸಲ್ಲಿಸುತ್ತಿರುವ ಅಖಿಲಾ ಆನೆಕಾರರವರು ಈ ರಂಗದಲ್ಲಿ ಅಪಾರ ಅನುಭವ ಹೊಂದಿದ್ದು, ಇವರು 2013-15ರ ಅವಧಿಯಲ್ಲಿ ಹುಬ್ಬಳ್ಳಿಯ ಪ್ರಖ್ಯಾತ ‘ಎಂ.ಎಂ. ಜೋಷಿ ಕಣ್ಣಿನ ಆಸ್ಪತ್ರೆ’ಯಲ್ಲಿ ವೃತ್ತಿ ನಿರ್ವಹಿಸಿದ್ದರು. ತದನಂತರ 2015 ರಿಂದ 2021ರ ವರೆಗೆ ಸುಳ್ಯದ ‘ಪ್ರಸಾದ್ ನೇತ್ರಾಲಯ’ದಲ್ಲಿ ಆಪ್ಟೋಮೆಟ್ರಿಸ್ಟ್ ಆಗಿ ಸೇವೆ ಸಲ್ಲಿಸಿ ಬಳಿಕ ತಮ್ಮದೇ ಸ್ವಂತ ಸಂಸ್ಥೆಯಾದ ‘ಕಿರಣ ಆಪ್ಟಿಕಲ್ಸ್’ ಅನ್ನು ನಡೆಸುತ್ತಿದ್ದಾರೆ.
ಸಂಪೂರ್ಣ ಉಚಿತ ಕಣ್ಣಿನ ಪರೀಕ್ಷೆ: ಕಿರಣ ಆಪ್ಟಿಕಲ್ಸ್ ನಲ್ಲಿ ಆಧುನಿಕ ಯಂತ್ರೋಪಕರಣಗಳ ಮೂಲಕ ಸಂಪೂರ್ಣ ಉಚಿತವಾಗಿ ಕಂಪ್ಯೂಟರೀಕೃತ ನೇತ್ರ ಪರೀಕ್ಷೆ ಮಾಡಲಾಗುತ್ತದೆ. ಕೇವಲ ಕಣ್ಣಿನ ತಪಾಸಣೆ ಮಾತ್ರವಲ್ಲದೆ, ಎಲ್ಲಾ ವಯಸ್ಸಿನವರಿಗೂ ಒಪ್ಪುವಂತಹ ಅತ್ಯಾಧುನಿಕ ವಿನ್ಯಾಸದ ಕನ್ನಡಕಗಳು (Spectacles), ಸನ್ಗ್ಲಾಸ್ಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್ಗಳು ಇಲ್ಲಿ ಲಭ್ಯವಿವೆ.







