ಉಬರಡ್ಕ: ಸಂಜೀವಿನಿ ಒಕ್ಕೂಟ ವತಿಯಿಂದ ಆಟಿಕೂಟ ಕಾರ್ಯಕ್ರಮ

0

ಮಿತ್ತೂರು ನಾಯರ್ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ಆಟಿ ಕೂಟ ಕಾರ್ಯಕ್ರಮವು ಜುಲೈ 20 ರಂದು ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ಜರುಗಿತು.

ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ ಕೈಪೆ ರವರು ಅಧ್ಯಕ್ಷತೆ ವಹಿಸಿ ಆಟಿ ಕೂಟದ ಆಚರಣೆ. ಮಹಿಳೆಯರ ಒಗ್ಗೂಡುವಿಕೆ ಬಗ್ಗೆ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಎಲ್ಲರನ್ನು ನೆನಪಿಸಿ ಕೃತಜ್ಞತೆ ಸಲ್ಲಿಸಿದರು

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರವಿಚಂದ್ರ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು

ಸಂಪನ್ಮೂಲವ್ಯಕ್ತಿಗಳಾಗಿ ನಿವೃತ್ತ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ರೇವತಿ ರವರು ಭಾಗವಹಿಸಿ ಮಹಿಳೆಯರ ಅರೋಗ್ಯ ಮತ್ತು ಗರ್ಭ ಕೊರಳಿನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು

ಮುಖ್ಯಅತಿಥಿಗಳಾದ
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ರವರು ಆಟಿ ಕೂಟದ ಬಗ್ಗೆ ಮಾತನಾಡಿದರು .

ಸಂಜೀವಿನಿ ತಾಲೂಕು ಘಟಕದ ವಲಯ ಮೇಲ್ವಿಚಾರಕರಾದ ಅವಿನಾಶ್ ರವರು ಸಂಜೀವಿನಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು

ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಪ್ರೇಮಕಲಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಆಟಿ ಕೂಟದ ಪ್ರಯುಕ್ತ ಎಲ್ಲಾ ಸಂಘದ ಸದಸ್ಯರು ವಿವಿಧ ಬಗೆಯ ಆಟಿ ಖಾದ್ಯಗಳನ್ನು ತಯಾರಿಸಿ ತಂದು ಉಣಬಡಿಸಿದರು

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಬಗೆಯ ಆಟಿ ಖಾಧ್ಯ ಗಳನ್ನು ಸವಿದು ಸಂಭ್ರಮಿಸಿದರು.

ಶ್ರೀಮತಿ ಸುಶೀಲ ಮೂರ್ಜೆ ಪ್ರಾರ್ಥಿಸಿದರು ಕಾರ್ಯದರ್ಶಿ ಶ್ರೀಮತಿ ವಾರಿಜ ಮಂಜಿಕಾನರವರು ಸ್ವಾಗತಿಸಿದರು.mbk ಶ್ರೀಮತಿ ಶುಭಲತಾ ರವರು ವಂದಿಸಿದರು

ಈ ಕಾರ್ಯಕ್ರಮ ದಲ್ಲಿ ಸಂಜೀವಿನಿ ಒಕ್ಕೂಟದ ಪಧಾಧಿಕಾರಿಗಳು ಸಂಘದ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು
ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು