ಕಾರು ಚಾಲಕರ ಸಂಘದ ಕಾರ್ಯದರ್ಶಿಯಾಗಿದ್ದ ವೆಂಕಟೇಶ್ವರ ಭಟ್ ಮೈರಾಜೆ ನಿಧನ

0


ಹಲವು ವರ್ಷಗಳ ಹಿಂದೆ ಸುಳ್ಯದ ಕಾರು ಚಾಲಕ, ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮರ್ಕಂಜದ ಬೊಮ್ಮಾರು ನಿವಾಸಿ , ಮೈರಾಜೆ ವೆಂಕಟೇಶ್ವರ ಭಟ್ ರವರು ಅಲ್ಪಕಾಲದ ಅಸೌಖ್ಯದಿಂದಾಗಿ ನಿನ್ನೆ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಉಸಿರಾಟದ ಸಮಸ್ಯೆ ಇದ್ದುದರಿಂದ ಆರು ತಿಂಗಳ ಹಿಂದೆ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿತ್ತು. ಆ ಬಳಿಕ ಅವರು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಜು.20 ರಂದು ಸೋಮವಾರ ಮಧ್ಯಾಹ್ನ ಅವರಿಗೆ ಉಸಿರಾಟದ ಸಮಸ್ಯೆ ಹೆಚ್ಚಾದುದರಿಂದ ಪತ್ನಿ ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಆರೂವರೆ ಗಂಟೆ ಹೊತ್ತಿಗೆ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ಶ್ರೀಮತಿ ಭಾರತಿ, ಪುತ್ರ ಕೆನಡಾದಲ್ಲಿರುವ ಆಕರ್ಷ, ಪುತ್ರಿ ಮೈಸೂರಿನಲ್ಲಿರುವ ಕು.ಅರ್ಪಿತಾ, ತಂದೆ ಮುಳ್ಳೇರಿಯಾದಲ್ಲಿರುವ ಮಹಾಲಿಂಗ ಭಟ್ ಹೊಸೊಳಿಕೆ , ಸಹೋದರಿಯರಾದ ಶ್ರೀಮತಿ ಜಯಲಕ್ಷ್ಮಿ ಸಿದ್ದನಕೆರೆ, ಶ್ರೀಮತಿ ಸುಮಂಗಲ ನೀರ್ಚಾಲು, ಶ್ರೀಮತಿ ಪ್ರಸನ್ನ ಪೈವಳಿಕೆ ಮತ್ತು ವಿಜಯಲಕ್ಷ್ಮಿ ಮುಳ್ಳೇರಿಯಾ, ಸೊಸೆ, ಮೊಮ್ಮಗು ಮತ್ತು ಬಂಧುಗಳನ್ನು ಅಗಲಿದ್ದಾರೆ.