ಲl ಕೃಷ್ಣ ಕುಮಾರ್ ಬಾಳುಗೋಡು ಅವರಿಗೆ ಡೈಮಂಡ್ ಪ್ರಶಸ್ತಿ

0

ಲಯನ್ಸ್ ಜಿಲ್ಲಾ 317ಡಿಯ ಪ್ರತಿಷ್ಠಿತ “ಡೈಮಂಡ್ ಅವಾರ್ಡ್” ಅನ್ನು ಜಿಲ್ಲೆಯ ಅತ್ಯುತ್ತಮ ಪಿಆರ್‌ಒ ಪ್ರಶಸ್ತಿಯಾಗಿ ಕೃಷ್ಣ ಕುಮಾರ್ ಬಾಳುಗೋಡು ಅವರಿಗೆ ಪ್ರದಾನಿಸಲಾಯಿತು.

ಮಂಗಳೂರಿನಲ್ಲಿ ನಡೆದ “ಧನ್ಯೋಸ್ಮಿ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಲಯನ್ ಕುಡ್ಪಿ ಅರವಿಂದ್ ಶೆಣೈ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅವರ ಕೃಷ್ಣ ಕುಮಾರ್ ರವರ ಪತ್ನಿ ಗಾಯತ್ರಿ ಕೃಷ್ಣ ಉಪಸ್ಥಿತರಿದ್ದು, ಪ್ರಶಸ್ತಿಯನ್ನು ಜೊತೆಯಾಗಿ ಸ್ವೀಕರಿಸಿದರು. ಕೃಷ್ಣ ಕುಮಾರ್ ಬಾಳುಗೋಡು ಅವರು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಚಾರ್ಟರ್ ಸದಸ್ಯರಾಗಿದ್ದು, ಕ್ಲಬ್‌ನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಘಟನೆಯೊಂದಿಗೆ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.