













ಜೇಸಿಐ ಪಂಜ ಪಂಚಶ್ರೀ ಹಾಗು ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಜೈ ಕರ್ನಾಟಕ ಯುವಕ ಮಂಡಲ (ರಿ) ಮತ್ತು ಕೃಪಾ ಯುವತಿ ಮಂಡಲ (ರಿ) ಅಳ್ಪೆ ಚಿಂಗಾಣಿಗುಡ್ಡೆ ಇದರ ಸಹಯೋಗದೊಂದಿಗೆ “ಯುವಾಭ್ಯುದಯ” ಯುವಕ ಯುವತಿ ಮಂಡಲಗಳಿಗೆ ಸರಣಿ ತರಬೇತಿ ಕಾರ್ಯಕ್ರಮದ ಐದನೇ ಕಾರ್ಯಕ್ರಮವು ಜು. 26ರಂದು ಯುವಕ ಮಂಡಲ ಸಭಾಭವನ ಚಿಂಗಾಣಿಗುಡ್ಡೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ತಾಲೂಕು ಮಹಿಳಾ ಮಂಡಲ ಒಕ್ಕೂಟಗಳ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರ್ ನೆರವೇರಿಸಿದರು.
ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ JFM ದೇವಿಪ್ರಸಾದ್ ಚಿಕ್ಮುಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಭಾಗವಹಿಸಿದ್ದರು. ವಲಯ ತರಬೇತುದಾರದ JFM ಸೋಮಶೇಖರ ನೇರಳ ತರಬೇತಿಯನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಜನಾರ್ಧನ ನಾಗತೀರ್ಥ,ಯುವಕ ಮಂಡಲದ ಅಧ್ಯಕ್ಷ ಶರತ್ ಅಳ್ಪೆ ,ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಸತ್ಯವತಿ ಶೇಡಿಗುಂಡಿ , ಜೇಸಿಐ ಪಂಜ ಪಂಚಶ್ರೀ ನಿಕಪೂರ್ವಾಧ್ಯಕ್ಷ

JFM ವಾಚಣ್ಣ ಕೆರೆಮೂಲೆ,
ಕಾರ್ಯಕ್ರಮ ನಿರ್ದೇಶಕರಾದ JFM ಜೀವನ್ ಶೆಟ್ಟಿಗದ್ದೆ ಹಾಗೂ ಕಾರ್ಯದರ್ಶಿ JFM ಪ್ರಕಾಶ್ ಅಳ್ಪೆ ಉಪಸ್ಥಿತರಿದ್ದರು.







