ಡಬ್ಬಡ್ಕ ಶಾಲಾ ಆವರಣಕ್ಕೆ ನುಗ್ಗಿದ ಕಾಡಾನೆ ಹಿಂಡು , ಕೃಷಿ ನಾಶ

0

ಡಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಒಳಗೆ ಕಾಡಾನೆ ಹಿಂಡು ನುಗ್ಗಿ ಶಾಲಾ ಆವರಣದ ಕೃಷಿಯನ್ನು ನಾಶ ಮಾಡಿದ ಘಟನೆ ಜು.28 ರಂದು ನಡೆದಿದೆ.

ಡಬಡ್ಕ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕಾಡಾನೆ ಹಿಂಡುಗಳ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ. ಜುಲೈ 28 ರಂದು ಡಬ್ಬಡ್ಕ ಶಾಲಾ ಆವರಣಕ್ಕೆ ಕೂಡಾ ನುಗ್ಗಿದ ಕಾಡಾನೆ ಹಿಂಡು ಶಾಲೆಯ ಆವರಣದಲ್ಲಿರುವ ಬಾಳೆ ಗಿಡ, ತೆಂಗಿನ ಗಿಡ ಸೇರಿದಂತೆ ಕೃಷಿಯನ್ನು ಸಂಪೂರ್ಣ ದ್ವಂಸ ಮಾಡಿದೆ. ಅಲ್ಲದೆ ,ಕೊಪ್ಪ, ಕುಡಕಲ್ಲು, ಬಾಳೆಕಜೆ, ಪನೇಡ್ಕ, ಹೊಸೂರುಕ, ಕಿರ್ಲಾಯ,ಕೆದಂಬಾಡಿ, ಕಾಂತಬೈಲು ಸೇರಿದಂತೆ ಕೃಷಿಕರ ತೋಟಕ್ಕೆ ನುಗ್ಗಿ ವಿಪರೀತ ಕೃಷಿಯನ್ನು ನಾಶಪಡಿಸಿದೆ.

ಇದರಿಂದ ಕೃಷಿಕರು ಸೇರಿದಂತೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು ಬೆಳಗ್ಗೆ ಕೂಡಾ ಸಾರ್ವಜನಿಕರಿಗೆ ಸಂಚರಿಸುವ ಭಯ ಭೀತಿ ಸೃಷ್ಟಿಯಾಗಿದೆ .ಆದಷ್ಟು ಬೇಗನೆ ಅರಣ್ಯಾಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಂಡು ಆನೆ ದಾಳಿಯಿಂದ ಗ್ರಾಮಸ್ಥರ ರಕ್ಷಣೆ ಹಾಗೂ ಹಾನಿಗೊಳಗಾದ ಕೃಷಿಕರಿಗೆ ಪರಿಹಾರ ಹೆಚ್ಚಳ ಮಾಡಿ ನ್ಯಾಯ ಒದಗಿಸಬೇಕಾಗಿ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.