ಸುಳ್ಯ : ಕೆರೆಮೂಲೆಯಲ್ಲಿ ರಸ್ತೆಯ ಬೇಡಿಕೆ ಇದ್ದ ಸ್ಥಳಕ್ಕೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭೇಟಿ, ಪರಿಶೀಲನೆ

0

ಮಂಜೂರಾಗಿರುವ ಇಂಟರ್ಲಾಕ್ ಕಾಮಗಾರಿಯನ್ನು ಶೀಘ್ರದಲ್ಲಿ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ತಹಶೀಲ್ದಾರ್ ಸೂಚನೆ

ಕೆರೆಮೂಲೆ ಪರಿಸರದಲ್ಲಿ ದಲಿತ ಕುಟುಂಬದ ಮನೆ ಸೇರಿದಂತೆ ಇನ್ನೆರಡು ಮನೆಗಳಿಗೆ ವಾಹನ ಹೋಗಲು ರಸ್ತೆ ಇಲ್ಲದ ಬಗ್ಗೆ ಮನೆಯವರು ಮಾಡಿರುವ ಬೇಡಿಕೆ ಮತ್ತು ಸಮಸ್ಯೆಯ ಬಗ್ಗೆ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ಶ್ರೀಮತಿ ಮಂಜುಳಾರವರು ಆ ೧ ರಂದು ಸಂಬಂಧಪಟ್ಟ ಅಧಿಕಾರಿಗಳು ನಿಯೋಗ ಮತ್ತು ಸ್ಥಳೀಯ ವಾರ್ಡಿನ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುಳಾರವರು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದು ಇಲ್ಲಿ ಇಂಟರ್ಲಾಕ್ ಅಳವಡಿಸಲು ಈಗಾಗಲೇ ಮಂಜೂರುಗೊಂಡಿರುವ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಮಾಡಿಕೊಡುವಂತೆ ಸೂಚಿಸಿದ್ದಾರೆ.

ಅಲ್ಲದೆ ಮನೆಗಳಿಗೆ ಇಳಿದು ಹೋಗುವ ಮೆಟ್ಟಿಲು ಜಾಗದಲ್ಲಿ ಪಕ್ಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಪಟ್ಟ ಜಾಗವಿದ್ದು ಮನೆಯವರು ಅವರೊಂದಿಗೆ ಮಾತನಾಡಿ, ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಅವರು ರಸ್ತೆಗೆ ಜಾಗ ನೀಡಲು ಒಪ್ಪಿಗೆ ನೀಡಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಬಹುದು ಅಲ್ಲದೆ ಇಲಾಖೆಯಿಂದ ಈ ಬಗ್ಗೆ ಏನು ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ನಿಯೋಗದಲ್ಲಿ ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.