













ಕೆ.ಎಸ್.ಆರ್.ಟಿ.ಸಿ ಸುಳ್ಯ ಘಟಕದಲ್ಲಿ ಸಂಚಾರ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ್ .ಬಿ ಮತ್ತು ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಾಲಕೃಷ್ಣ ಕೆ.ಬಿ ಇವರಿಗೆ ಬೀಳ್ಕೊಡುಗೆ ಸಮಾರಂಭವು ಜು.31 ರಂದು ಸುಳ್ಯ ಘಟಕದಲ್ಲಿ ನಡೆಯಿತು.
ಘಟಕ ವ್ಯವಸ್ಥಾಪಕರಾದ ಶ್ರೀಮತಿ ಸತ್ಯಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಚಾರ ನಿರೀಕ್ಷಕರಾದ ಪದ್ಮನಾಥನ್, ಪಾರುಪತ್ತೆದಾರ ಹರೀಶ್ ಎಸ್, ಅಕೌಂಟ್ ಸುಪರ್ ವೈಸರ್ ಶಿವಾನಂದ, ಸಂಚಾರ ನಿಯಂತ್ರಕರಾದ ಜಗದೀಶ್, ಪಾಳಿಯ ಮುಖ್ಯಸ್ಥ ಮೋನಪ್ಪ ಗೌಡ ಗೆಜ್ಜೆ, ಗೋಪಾಲ್ ಈಶ್ವರಡ್ಕ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಚಾಲಕ ಕೇಶವ ಮರಕ್ಕಡ ಸ್ವಾಗತಿಸಿದರು. ಮೆಕ್ಯಾನಿಕ್ ಲೊಕೇಶ್ ಸುತ್ತುಕೋಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







