













ಹಿಂದೂ ಇಕಾನಮಿಕ್ ಪೋರಂ ಸುಳ್ಯ ಘಟಕ ಇದರ ವತಿಯಿಂದ ಆ.9 ರಂದು ಸಾಯಾಂಕಾಲ ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಸಭಾಭವನ ಒಡಬಾಯಿ ಸುಳ್ಯ ಇಲ್ಲಿ ಕುಟುಂಬ ಮಿಲನ -2026 ಎಂಬ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವರ್ಲ್ಡ್ ಹಿಂದೂ ಇಕನಾಮಿಕ್ ಫೋರಂ ಇದರ ಸ್ಥಾಪಕ ಅಧ್ಯಕ್ಷರಾದ ಸ್ವಾಮಿ ವಿಗ್ಯಾನಾನಂದಜೀ ಯವರು ಸಂಘನಿಕೇತನ ಮಂಗಳೂರು ಇಲ್ಲಿ ಜು. 31ರಂದು ನಡೆದ ಅಹ್ವಾನಿತ ತಂಡಗಳ ಚಾಪ್ಟರ್ ಮೀಟಿಂಗ್ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಘಟಕದ ಸ್ಥಾಪಕಾಧ್ಯಕ್ಷರಾದ ಕೇಶವ ನಾಯಕ್ ಉಪಾಧ್ಯಕ್ಷರಾದ ಅಶ್ವತ್ ಬಿಳಿಮಲೆ ಕಾರ್ಯದರ್ಶಿ ಜನಾರ್ಧನ ಧೋಳ ಜೊತೆ ಕಾರ್ಯದರ್ಶಿ ಗುರುರಾಜ್ ಭಟ್ ಖಜಾಂಜಿ ಶರತ್ ಕುಡೆಕಲ್ಲು ಪದಾಧಿಕಾರಿಗಳಾದ ಚಿದಾನಂದ ವಿದ್ಯಾನಗರ, ಶರತ್ ಕಲ್ಲುಗುಂಡಿ, ಚಂದ್ರಶೇಖರ ಉಬರಡ್ಕ, ಕೃಷ್ಣಪ್ರಸಾದ್ ವಾಗ್ಲೆ, ನಂದಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







