ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಶರಣ್ಯ ಎನ್. ಟಿ. ರಾಷ್ಟ್ರೀಯ ಮಟ್ಟದ ಇನ್ ಸ್ಪಾಯರ್ ಅವಾರ್ಡ್ ಗೆ ಆಯ್ಕೆ

0

ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇದರ ವತಿಯಿಂದ 2023-24ನೇ ಸಾಲಿನಲ್ಲಿ ನಡೆದ ರಾಜ್ಯ ಮಟ್ಟದ ಇನ್ ಸ್ಪಾಯರ್ – ಮಾನಕ್ ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಯೋಜನಾ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶರಣ್ಯ .ಎನ್. ಟಿ
ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರು ಅಭಿವೃದ್ಧಿಪಡಿಸಿದ ಕಡಿಮೆ ವೆಚ್ಚದ ಅಡಿಕೆ ಸುಲಿಯುವ ಯಂತ್ರದಿಂದ ಅತ್ಯಂತ ಕಡಿಮೆ ಶಕ್ತಿ ಉಪಯೋಗಿಸಿ, ಕಡಿಮೆ ಕೆಲಸಗಾರರ ಸಹಾಯದಿಂದ ವೇಗವಾಗಿ ಅಡಿಕೆ ಸುಲಿಯಬಹುದು ಮತ್ತು ಉತ್ತಮ ಸಂಸ್ಕರಣೆಗೂ ಸಹಾಯಕವಾಗುತ್ತದೆ.

ಇವರು ಪೆರಾಜೆ ನಿಡ್ಯಮಲೆಯ ತಿರುಮಲೇಶ್ವರ ಎನ್.ಬಿ ಹಾಗೂ ಶ್ರೀಮತಿ ಭವಾನಿ ಎನ್. ಟಿ ಇವರ ಸುಪುತ್ರಿ. ಇವರಿಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಶಾಲಿನಿ ರಾಮಕೃಷ್ಣ ಮಾರ್ಗದರ್ಶನ ನೀಡಿದ್ದರು.