ಬಾಳಿಲ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮ ಸಭೆ

0

ಮೆಸ್ಕಾಂ,ಪಿಡಬ್ಲ್ಯುಡಿ ಇಲಾಖಾಧಿಕಾರಿಗಳು ಗೈರು, ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಸುದೀರ್ಘ ಚರ್ಚೆ

ಬಾಳಿಲ ಗ್ರಾಮ ಪಂಚಾಯತ್ 2025 – 26. ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಗುರುಪ್ರಸಾದ್ ಎಂ.ಎಸ್.ರವರ ಅಧ್ಯಕ್ಷತೆಯಲ್ಲಿ ಆ.05 ರಂದು ಪಂಚಾಯತ್ ವಠಾರದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಪಿಡಿಒ ಸರಿತಾ ಓಲ್ಗಾ ಡಿಸೋಜಾರವರು ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಶೀಲ ರೈಯವರು ವರದಿ ಮಂಡಿಸಿದರು.
ಮೆಸ್ಕಾಂ ಅಧಿಕಾರಿಗಳು ಮತ್ತು ಪಿಡಬ್ಲ್ಯುಡಿ ಇಲಾಖಾಧಿಕಾರಿಗಳು ಗ್ರಾಮಸಭೆಗೆ ಗೈರಾಗಿರುವ ಬಗ್ಗೆ, ಬೀದಿನಾಯಿಗಳ ಕಾಟ,ವಿದ್ಯುತ್ ಕಂಬ ಬದಲಾವಣೆ,ಚರಂಡಿ ವ್ಯವಸ್ಥೆ, ರಸ್ತೆಯಲ್ಲಿ ನೀರು ನಿಂತಿರುವುದು,ಶಾಲೆಯಲ್ಲಿ ಶಿಕ್ಷಕರ ಕೊರೆತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆದವು.
ರಾಧಾಕೃಷ್ಣ ರಾವ್ ಉಡುವೆಕೋಡಿ,ಬಾಲಕೃಷ್ಣ ಮರಂಗಲ,ರವೀಂದ್ರ ರೈ ಟಪ್ಪಾಲುಕಟ್ಟೆ,ಹರ್ಷ ಜೋಗಿಬೆಟ್ಟು,ಶರೀಫ್ ಭಾರತ್ ಬಾಳಿಲ, ರಾಜೇಶ್ ಅಯ್ಯನಕಟ್ಟೆ,ಜುನೈದ್ ಬಾಳಿಲ, ಸುಬ್ರಹ್ಮಣ್ಯ ಕಾವಿನಮೂಲೆ,ಬಾಲಕೃಷ್ಣ ರೈ ಪಾದೆಕಲ್ಲು,ವಾರಿಜ ಬೊಳಿಯಕಂಡ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು.
ಮಧುರ ತೋಟದಮೂಲೆ ಪ್ರಾರ್ಥಿಸಿ,
ಗ್ರಂಥಾಲಯ ಮೇಲ್ವಿಚಾರಕ ಬಾಬು ಮರುವಂಜ ಕಾರ್ಯಕ್ರಮ ನಿರೂಪಿಸಿದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಆರೋಗ್ಯ ಇಲಾಖೆಯಿಂದ ಬಿ.ಪಿ., ಶುಗರ್ ಉಚಿತ ಪರೀಕ್ಷೆ,

ಬಾಳಿಲ ಆರೊಗ್ಯ ಕೇಂದ್ರದ ವತಿಯಿಂದ ಗ್ರಾಮ ಸಭೆಯಲ್ಲಿ ಭಾಗವಹಿಸಿದವರ ಬಿ.ಪಿ ಹಾಗೂ ಶುಗರ್ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಮೋಹಿನಿ ಮತ್ತು ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ಜ್ಯೋತಿಯವರು ಉಚಿತವಾಗಿ ಬಿ.ಪಿ,ಶುಗರ್ ಪರೀಕ್ಷೆ ನಡೆಸಿದರು.