ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ನಿವೃತ್ತ ಮೆಸ್ಕಾಂ ಮೆಕ್ಯಾನಿಕ್ ರವರಿಗೆ ಸನ್ಮಾನ

0

ಮೆಸ್ಕಾಂ ಸುಬ್ರಹ್ಮಣ್ಯ ಉಪ ವಿಭಾಗದ ಹಾಗೂ ಶಾಖೆಯ ಸೀನಿಯರ್ ಮೆಕ್ಯಾನಿಕ್ ಪಾಲಾಕ್ಷರವರು ಜು. 31ರಂದು ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪಾಲಾಕ್ಷ ದಂಪತಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರಾದ ವಿಶ್ವನಾಥ ನಡುತೋಟ, ಚಂದ್ರಶೇಖರ ನಾಯರ್, ಗೋಪಾಲ ಎಣ್ಣೆ ಮಜಲ್, ಲೋಕೇಶ ಬಿ. ಎನ್, ಡಾl ರವಿ ಕಕ್ಕೆ ಪದವು, ಸದಸ್ಯರುಗಳಾದ ದಿನೇಶ ಎಣ್ಣೆಮಜಲು, ದಯಾನಂದ ಪೈಕ, ಲೋಕೇಶ ಎಣ್ಣೆ ಮಜ್ಜಲು ಮತ್ತಿತರರು ಭಾಗವಹಿಸಿದ್ದರು.