ಎಡಮಂಗಲ: ಪುಳಿಕುಕ್ಕು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡುಗೆ

0

ಎಡಮಂಗಲ ಗ್ರಾಮದ ಪುಳಿಕುಕ್ಕು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸವಣೂರು ಗ್ರಾಮ ಪಂಚಾಯತ್ ನ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುವ ಎಸ್.ಇವರು ಒಂದು ಜೊತೆ ಸಮವಸ್ತ್ರವನ್ನು ಜು. 27 ರಂದು ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕಮಲಾಕ್ಷಿ ಕೊಡಂಗೆ, ಉಪಾಧ್ಯಕ್ಷ ಜಯಲಕ್ಷ್ಮಿ, ಪೋಷಕರಾದ ಯಶ್ವಿತ, ಜಯಂತಿ, ರಕ್ಷಿತ, ರಮ್ಯಾ,ವೀಣಾ,ಶಾಲಾ ಮುಖ್ಯ ಶಿಕ್ಷಕಿ ಗೀತಾ.ಜಿ, ಅತಿಥಿ ಶಿಕ್ಷಕಿ ಗೀತಾ.ಜಿ, ಅಕ್ಷರ ದಾಸೋಹ ಸಿಬ್ಬಂದಿ ತಿರುಮಲೇಶ್ವರಿ ಉಪಸ್ಥಿತರಿದ್ದರು.