ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಗೆ ಕಳಂಜ ಬಾಳಿಲ ಸಹಕಾರಿ ಸಂಘದಿಂದ ಕೊಡುಗೆಯ ಹಸ್ತಾಂತರ

0

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳಿಗೆ ಪ್ರೊಜೆಕ್ಟರ್ ಮತ್ತು ಟ್ರೈ ಪೋಲ್ ಸ್ಟ್ಯಾಂಡ್ ಸಹಿತ ಸ್ಕ್ರೀನ್ ನ್ನು ಕೊಡುಗೆಯಾಗಿ ನೀಡಿದರು. ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯುರವರ ಅಧ್ಯಕ್ಷತೆಯಲ್ಲಿ ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅಜಿತ್ ರಾವ್ ಕೀಲಂಗೋಡಿ ಕೊಡುಗೆಯ ಹಸ್ತಾಂತರವನ್ನು ಮಾಡಿ ವಿದ್ಯಾಸಂಸ್ಥೆಗೆ ಶುಭ ಹಾರೈಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್, ನಿರ್ದೇಶಕರಾದ ಸುಬ್ರಾಯ ಭಾರದ್ವಾಜ್, ಹರ್ಷ ಜೋಗಿಬೆಟ್ಟು, ಶಾಲಾ ಸಂಚಾಲಕರದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರೌಢಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಹರಿಣಾಕ್ಷಿ ಬಿ, ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ರಮೇಶ್ ಕಾಚಿಲ, ಮುಖ್ಯಶಿಕ್ಷಕ ಉದಯಕುಮಾರ್ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.