ಜಯನಗರ: ಶ್ರೀ ಗಜಾನನ ಭಜನಾ ಮಂದಿರದ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಬಾಬು ಟೈಲರ್, ಕಾರ್ಯದರ್ಶಿ ಅನುರಾಧ ನಾಗರಾಜ್

ಜಯನಗರದ ಶ್ರೀ ಗಜಾನನ ಭಜನಾ ಮಂದಿರದ ಸಬೆ ಹಾಗೂ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.

ಇದರ ನೂತನ ಅಧ್ಯಕ್ಷರಾಗಿ ಬಾಬು ಟೈಲರ್ ಜಯನಗರ, ಕಾರ್ಯದರ್ಶಿಯಾಗಿ ಅನುರಾಧ ನಾಗರಾಜ್, ಗೌರವಾಧ್ಯಕ್ಷರಾಗಿ ಅನಂತಪ್ರಕಾಶ್, ಜತೆ ಕಾರ್ಯದರ್ಶಿಯಾಗಿ ಅಮಿತ್ ಕುಮಾರ್, ಉಪಾಧ್ಯಕ್ಷರಾಗಿ ಸುರೇಂದ್ರ ಕಾಮತ್, ಖಜಾಂಜಿಯಾಗಿ ಮಾಧವ.ಎ, ಹಾಗೂ ಸದಸ್ಯರುಗಳಾಗಿ ನಾಗವೇಣಿ, ಹೇಮಾ ಸಾಂತಪ್ಪ, ಅಭಿಷೇಕ್, ವಿಶ್ವನಾಥ ನಾಯ್ಕ್ ಆಯ್ಕೆಯಾದರು.