ಆ.9 : ಸುಬ್ರಹ್ಮಣ್ಯದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸ‌ರ್ ತಪಾಸಣಾ ಶಿಬಿರ

0

ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನೇತೃತ್ವ, ಸಂಘಟನೆಗಳ ಸಹಯೋಗ

ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನೇತೃತ್ವದಲ್ಲಿ, ಯೆನೆಪೋಯ ಮೆಡಿಕಲ್‌ ಕಾಲೇಜು ಆಸ್ಪತ್ರೆ ಮತ್ತು ಜುಲೈಕಾ ಯೆನೆಪೋಯ ಕಾನ್ಸರ್ ಆಸ್ಪತ್ರೆ, ದೇರಳಕಟ್ಟೆ ಸಹಕಾರದಲ್ಲಿ 5ನೇ ವರ್ಷದ “ಉಚಿತ ಆರೋಗ್ಯ ಮತ್ತು ಕ್ಯಾನ್ಸ‌ರ್ ತಪಾಸಣಾ ಶಿಬಿರ” ಆ.9 ರಂದು ದೇವಿಪ್ರಸಾದ್ ಶೆಟ್ಟಿ ತಡಗಜೆಯವರ ಸಹಕಾರದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮುಂಭಾಗದ ಸಭಾಂಗಣದಲ್ಲಿ ನಡೆಯಲಿದೆ.

ಕ್ಯಾನ್ಸರ್ ತಪಾಸಣಾ ವಿಭಾಗ, ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗ ಕಣ್ಣು ಮತ್ತು ದಂತ ವಿಭಾಗ, ವೈದ್ಯಕೀಯ ಶಾಸ್ತ್ರ ವಿಭಾಗ, ಮೂಳೆ ವಿಭಾಗ ಮತ್ತಿತರರು ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ ಇದೆ. ಕಿವಿ-ಮೂಗು-ಗಂಟಲು ವಿಭಾಗ ಚರ್ಮರೋಗ ವಿಭಾಗ ಎಲೆಕ್ಟೋಕಾರ್ಡಿಯೋಗ್ರಾಮ್ (ಇಸಿಜಿ) ,ಮಧುಮೇಹ ತಪಾಸಣೆ ಹಾಗೂ ಉಚಿತ ಕೆಲ ಜೌಷಧಿ ದೊರೆಯಲಿದ್ದು ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳುವಂತೆ ಕೋರಲಾಗಿದೆ.

ಕಾರ್ಯಕ್ರಮಕ್ಕೆ ಸುರಕ್ಷಾ ಚಾರಿಟೇಬಲ್ ಟ್ರಸ್ಟ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸೀನಿಯ‌ರ್ ಚೇಂಬ‌ರ್ ಸುಬ್ರಹ್ಮಣ್ಯ, ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ, ಯುವ ತೇಜಸ್ಸು ಟ್ರಸ್ಟ್, ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ, ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ, ಪ್ರೆಸ್ ಕ್ಲಬ್ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ, ಕುಕ್ಕೆ ಸಂಜೀವಿನಿ, ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿ ಸುಬ್ರಹ್ಮಣ್ಯ ಸಂಘಟನೆಗಳು ಸಹಕಾರ ನೀಡಲಿವೆ.