















ಅಕ್ಷಯ ಯುವಕ ಮಂಡಲ ನೆಟ್ಟಾರು, ಅಕ್ಷತಾ ಮಹಿಳಾ ಮಂಡಲ ನೆಟ್ಟಾರು, ಶಾಲಾ ಮೇಲುಸ್ತುವಾರಿ ಸಮಿತಿ ನೆಟ್ಟಾರು ಹಾಗೂ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಬೆಳ್ಳಾರೆ ಇವುಗಳ ಸಹಯೋಗದಲ್ಲಿ ನೆಟ್ಟಾರು ಪರಿಸರದ ಸ್ವಚ್ಛತಾ ಕಾರ್ಯಕ್ರಮ ಆಗಸ್ಟ್ 09 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಯುವಕ ಮಂಡಲ ಅಧ್ಯಕ್ಷ ಭಾಸ್ಕರ ನೆಟ್ಟಾರು, ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ನೂತನ ಪ್ರವೀಣ್ ನೆಟ್ಟಾರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ನೆಟ್ಟಾರು,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಲೋಕೇಶ್ ನೆಟ್ಟಾರು, ಯೋಜನೆಯ ಸುಳ್ಯ ತಾಲೂಕು ಮೇಲ್ವಿಚಾರಕಿ ಶ್ರೀಮತಿ ಗೀತಾ ಸಂಕಪ್ಪ, ಬೆಳ್ಳಾರೆ ವಲಯ ಸಂಯೋಜಕಿ ಶ್ರೀಮತಿ ಶೀಬಾ ರೈ,ಬೆಳ್ಳಾರೆ ಗ್ರಾಮ ಸೇವಾ ದೀಕ್ಷಿತೆ ಶ್ರೀಮತಿ ಸವಿತಾ ಹಾಗೂ ಯುವಕ ಮಂಡಲ, ಮಹಿಳಾ ಮಂಡಲ ಪದಾಧಿಕಾರಿಗಳು, ಸದಸ್ಯರುಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಮಕ್ಕಳು ಮತ್ತು ಗ್ರಾಮ ವಿಕಾಸ ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.







