ಪಂಜದಲ್ಲಿ ವಿಜ್ರಂಭಿಸಿದ ಆಟಿ ನೆಂಪು -2026

0

🔶 ಪ್ರಕೃತಿ ಎಂದರೆ ಕಾಮಧೇನು: ನಿವೃತ್ತ ಶಿಕ್ಷಕಿ ಶ್ರೀಮತಿ ಚಂದ್ರಮತಿ

“ಖಗೋಳ ಶಾಸ್ತ್ರದ ಪ್ರಕಾರವಾಗಿ ಆಟಿ ತಿಂಗಳು ಭೌಗೋಳಿಕ ಹಿನ್ನೆಲೆ ಉಂಟು. ಭೌಗೋಳಿಕ ಮಹತ್ವದಿಂದಾಗಿ ಅಲ್ಲಿನ ಪರಿಸರ ಸಾಮಾಜಿಕ, ಸಾಂಸ್ಕೃತಿಕವಾಗಿ ಇನ್ನೂ ವಿಶೇಷತೆಯನ್ನು ಪಡೆದುಕೊಂಡಿದೆ. ಈ ತಿಂಗಳಲ್ಲಿ ಆಹಾರ ಪದ್ಧತಿ ಕೂಡ ವಿಶೇಷತೆಯನ್ನು ಪಡೆದಿದೆ. ಈ ತಿಂಗಳು ಹೆಚ್ಚು ಬಿಸಿಲು, ಹೆಚ್ಚು ಮಳೆ. ಅದಕ್ಕಾಗಿ ಕೃಷಿ ಚಟುವಟಿಕೆಗೆ ವಿರಾಮದ ಸಮಯವಿದು. ಇಡೀ ಜೀವ ಜಗತ್ತಿಗೆ ಇರುವಂತದು ಒಂದೇ ಪ್ರಕೃತಿ. ವಿಶೇಷವಾಗಿ ಪ್ರಕೃತಿಯ ಆರಾಧಿಸುವ ತಿಂಗಳು ಇದು. ಪ್ರಕೃತಿಯೆಂದರೆ ಕಾಮಧೇನು”.
ಎಂದು ನಿವೃತ್ತ ಶಿಕ್ಷಕಿ
ಶ್ರೀಮತಿ ಚಂದ್ರಮತಿ ಹೇಳಿದರು.


ಅವರು ಆ.9 ರಂದು ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜೇಸಿಐ ಪಂಜ ಪಂಚಶ್ರೀ ಲಯನ್ಸ್ ಕ್ಲಬ್ ಪಂಜ ಇವರ ಆಶ್ರಯದಲ್ಲಿ ನಡೆದ ‘ಆಟಿ ನೆಂಪು-2026″ ಆಟಿ ತಿಂಗಳ ವಿಷ್ಯ ನೆಂಪಿಸುವ ಜಂಬರ….ಸಭಾ ಕಾರ್ಯಕ್ರಮದಲ್ಲಿ
ಇವರು ಮುಖ್ಯ ಭಾಷಣ ಮಾಡಿದರು.

ಸಭಾಕ್ಷತೆಯನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸರಣಿ ತರಬೇತಿ ಮತ್ತು ಇತರ ತರಬೇತಿ ವಿಭಾಗ, ವಲಯ 15, ಜೇಸಿಐ ಭಾರತ ಇದರ ವಲಯ ಸಂಯೋಜಕರಾದ ಜೇಸಿ ಭಾಗ್ಯೇಶ್ ರೈ, ಲಯನ್ಸ್ ಜಿಲ್ಲಾ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಲ. ಜಯರಾಮ್ ದೇರಪ್ಪಜ್ಜನಮನೆ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ್‌ ಕುಮಾರ್ ಕರಿಕ್ಕಳ, ಹಾಗೂ ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ,
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು,ಸದಸ್ಯರಾದ ಡಾ. ಎನ್ ಎ.ಜ್ಞಾನೇಶ್, ಪಿ.ಎಸ್ ಕಾರ್ಯಪ್ಪ, ಶ್ರೀಮತಿ ಲತಾ ಪ್ರಸಾದ್ ಕುದ್ಪಾಜೆ, ಲಯನ್ಸ್ ಕ್ಲಬ್ ಆನಂದ ಗೌಡ ಜಳಕದ ಹೊಳೆ, ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ,
ಕಾರ್ಯಕ್ರಮ ನಿರ್ದೇಶಕ ವಿಜೇಶ್ ಹಿರಿಯಡ್ಕ,ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಪ್ರಕಾಶ್ ಅಳ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಪೇರಾಲು ಪ್ರಸ್ತಾವಿಕಗೈದು ಮಾತನಾಡಿದರು.ಕೌಶಿಕ್ ಕುಳ ನಿರೂಪಿಸಿದರು.ವಾಸುದೇವ ಮೇಲ್ಪಾಡಿ
ವಂದಿಸಿದರು.
ಹೈಲೆಟ್ಸ್

ವಾಟ್ಸಾಪ್‌ ಅರೆಭಾಷೆ ಸ್ವರಚಿತ ಕವನ ಸ್ಪರ್ಧೆ,ಚೆನ್ನೆಮಣೆ,ಚಿತ್ರಕಲೆ ಸ್ಪರ್ಧೆ,ಅರೆಭಾಷೆ ಭಾಷಣ ಸ್ಪರ್ಧೆ, ಆಟಿ ಖಾದ್ಯ ಸ್ಪರ್ಧೆ,ನೀರ್ ದೋಸೆ ಹೊಯ್ಯವ ಸ್ಪರ್ಧೆ,ಹಸಿ ತರಕಾರಿಗಳ ಆಲಂಕಾರಿಕವಾಗಿ ಜೋಡ್ಸುವ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು.ಬೆಳಿಗ್ಗೆ, ಸಂಜೆ ಉಪಹಾರ ಮತ್ತೆ ಮಧ್ಯಾಹ್ನ ಆಟಿ ಊಟ
ವಿಶೇಷವಾಗಿತ್ತು.ಸಭಾಂಗಣದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿತ್ತು.
ಟೀಮ್ ಉಬಾರ್ ಇವರ ನೇತೃತ್ವದಲ್ಲಿ ಸ್ವದೇಶಿ ಖಾದ್ಯ ಮೇಳ ಪ್ರಯುಕ್ತ ಹೂವಿನ ಗಿಡ, ಆಟಿಕೆ, ಮಣ್ಣಿನ ಮಡಿಕೆ, ತಿನಿಸುಗಳು, ಸೇರಿದಂತೆ ವಿವಿಧ ಮಳಿಗೆಗಳು ಇದ್ದವು.