ದುಗ್ಗಲಡ್ಕ; ಕೊಯಿಕುಳಿ ಶಾಲಾ ಬಳಿ ಆನೆಗಳಿರುವ ಶಂಕೆ

0

ಮುಂಜಾಗ್ರತೆಗಾಗಿ ಕೊಯಿಕುಳಿ ಶಾಲೆಗೆ ರಜೆ ಘೋಷಣೆ

ಕಳೆದ ಹತ್ತಾರು ದಿನಗಳಿಂದ ದುಗ್ಗಲಡ್ಕದ ಕಂದಡ್ಕದಲ್ಲಿ ಬೀಡು ಬಿಟ್ಟಿದ್ದ ಆನೆಗಳು ಕಳೆದ ರಾತ್ರಿ ಕೊಯಿಕುಳಿ ಶಾಲಾ ಬಳಿಯ ತೋಟಗಳಿಗೆ ನುಗ್ಗಿದ್ದು, ಅಲ್ಲೇ ಇರುವ ಅನುಮಾನವಿರುವುದರಿಂದ ಮುಂಜಾಗ್ರತೆಗಾಗಿ ಕೊಯಿಕುಳಿ ಶಾಲೆಗೆ ಇಂದು ರಜೆಗೆ ಘೋಷಿಸಲಾಗಿದೆ.
ಕಳೆದ ರಾತ್ರಿ ನೀರಬಿದಿರೆ ಡಾ.ಗಣೇಶ್ ಭಟ್, ಶಂಭಯ್ಯ ಪಾರೆ, ಸುರೇಶ್ಚಂದ್ರ ಕಮಿಲ, ಕೇಶವಯ್ಯ ಪಾರೆ, ಜನಾರ್ದನ ಗೌಡ, ವಾಸುದೇವ ಗೌಡ ಮೊದಲಾದವರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿರುವುದಾಗಿ ತಿಳಿದುಬಂದಿದ್ದು, ಅಲ್ಲೇ ಕಾಡಿನಲ್ಲಿ ಇರುವುದಾಗಿ ಶಂಕಿಸಲಾಗಿದೆ. ಮಕ್ಕಳ ಮುಂಜಾಗ್ರತೆಯಿಂದ ಕೊಯಿಕುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಜೆ ಘೋಷಿಸಲಾಗಿರುವುದಾಗಿ ತಿಳಿದುಬಂದಿದೆ.