ಶಾಂತಿನಗರ : ಮಾಸಿಕ ಸ್ವಾಲಾತ್ ಮಜ್ಲೀಸ್ ಹಾಗೂ ಪ್ರಾರ್ಥನಾ ಸಂಗಮ

0

ನಬಿ ಕೀರ್ತನೆಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ : ಉಸ್ತಾದ್ ಮುನೀರ್ ಸಅದಿ

ಪೈಗಂಬರ್ ಮೊಹಮ್ಮದ್ ನಬಿರವರ ಮೇಲಿನ ಸ್ವಲಾತ್, ಹಾಗೂ ನಬಿ ಕೀರ್ತನೆಗಳು ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತದೆ. ಯುವ ಸಮುದಾಯವು ಸಮಾಜದ ಅಮೂಲ್ಯ ನಿಧಿಗಳಾಗಿದ್ದು ಒಳಿತಿನತ್ತ ಹೆಜ್ಜೆ ಹಾಕುವ ಮೂಲಕ ಸುಂದರ ಬದುಕನ್ನು ಕಟ್ಟಿ ಪೈಗಂಬರವರ ಪ್ರೀತಿಗೆ ಪಾತ್ರರಾಗಬೇಕು ಎಂದು ಪೈಚಾರ್ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಉಸ್ತಾದ್ ಮುನೀರ್ ಸಅದಿ ಅಲ್ ಅರ್ಷದಿ ರವರು ಹೇಳಿದರು.

ಆ 9 ರಂದು ಶಾಂತಿನಗರ ನೂರುಲ್ ಇಸ್ಲಾಂ ಮದ್ರಸದಲ್ಲಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ನಡೆದ ಸ್ವಲಾತ್ ಮಾಸಿಕ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.ಸೆಯ್ಯದ್ ಮಸ್ಸ್ಹೂದ್ ಕೂರತ್ ತಂಙಳ್ ರವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ
ಮಾಸಿಕ ಸ್ವಲಾತ್ ಕಾರ್ಯಕ್ರಮ ನಡೆಯುತ್ತಿದ್ದು ಸಾಮೂಹಿಕ ದುವಾ ನೇತೃತ್ವವನ್ನು ತ್ವಾಹಿರ್ ಸಅದಿ ಬಾಅಲವಿ ತಂಙಳ್ ಸುಳ್ಯ ನೆರವೇರಿಸಿದರು.

ವೇದಿಕೆಯಲ್ಲಿ ಸಯ್ಯಿದ್ ಹುಸೈನ್ ತಂಗಳ್ ಆದೂರು, ಮದ್ರಸಾ ಸಮಿತಿಯ ಅಧ್ಯಕ್ಷ ಹಾಜಿ ಪಳ್ಳಿ ಕುಂಞಿ, ಜಯನಗರ ಮದ್ರಸಾ ಸದರ್ ಮುಅಲ್ಲಿಂ ಶಫೀಕ್ ನಈಮಿ,ಉಸ್ತಾದ್ ಅಶ್ರಫ್ ಅಂಜುಮಿ,ಬಶೀರ್ ಸಕಾಫಿ ಜಯನಗರ, ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಮದರಸ ಸದರ್ ಮುಅಲ್ಲಿಂ ಅಬ್ದುರಶೀದ್ ಝೖನಿ ಪೆರಾಜೆ ಪ್ರಾಸ್ತವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ (ಅಂದು) ಹಾಗೂ ಸಮಿತಿಯ ಸದಸ್ಯರುಗಳು ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಿತು.