ಕುಟುಂಬ ಸದೃಢವಾಗಿದ್ದರೆ ನಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯಲು ಸಾಧ್ಯ : ಶೋಭಾ ಚಿದಾನಂದ















ಹಿಂದೂ ಇಕಾನಾಮಿಕ್ ಫೋರಂ ಸುಳ್ಯ ಘಟಕದ ಕುಟುಂಬ ಮಿಲನ ಕಾರ್ಯಕ್ರಮ ಆ.9 ರಂದು ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.
ಸಮಾರಂಭದಅಧ್ಯಕ್ಷತೆಯನ್ನು ಸುಳ್ಯ ಘಟಕದ ಅಧ್ಯಕ್ಷ ಅನೂಪ್ ಕಮಲಾಕ್ಷ ಪೈ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎ.ಒ.ಎಲ್.ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ರವರು
ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಹೆಚ್.ಇ.ಎಫ್ ಮುಳ್ಳೇರಿಯಾ ಘಟಕದ ಅಧ್ಯಕ್ಷರಾದ ರಾಘವ ಆರ್.ಕೆ, ಪುತ್ತೂರು ಘಟಕದ ಅಧ್ಯಕ್ಷ ಮೋಹನ ಕೆ, ಸುಳ್ಯ ಘಟಕದ ಸ್ಥಾಪಾಕಾಧ್ಯಕ್ಷ ಕೇಶವ ನಾಯಕ್ ಸುಳ್ಯ, ಕಾರ್ಯದರ್ಶಿ ಜನಾರ್ದನ ದೋಳ, ಉಪಾಧ್ಯಕ್ಷ ಅಶ್ವಥ್ ಬಿಳಿಮಲೆ, ಕೋಶಾಧಿಕಾರಿ ಶರತ್ ಕುಡೆಕಲ್ಲು,ಜತೆಕಾರ್ಯದರ್ಶಿ ಗುರುರಾಜ್ ಎಲಿಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರ್ಥಿಕತೆಯಲ್ಲಿ ಹೆಚ್.ಇ.ಎಫ್ ನ ಪಾತ್ರ ವಿಷಯದ ಕುರಿತು ಮುಳ್ಳೇರಿಯಾ ಜಗನ್ಮಾತ ಆಸ್ಪತ್ರೆಯ ವ್ಯವಸ್ಥಾಪಕ ಪಾಲುದಾರರಾದ ಎಸ್.ಎನ್.ಪ್ರಸಾದ್ ರವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕೋಲ್ಚಾರುಸ.ಉ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಯವರನ್ನು ಘಟಕದ ವತಿಯಿಂದಸನ್ಮಾನಿಸಲಾಯಿತು.

2025-26 ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಹೆಚ್.ಇ.ಎಫ್ ಕುಟುಂಬದ ಸದಸ್ಯರ ಮಕ್ಕಳನ್ನುಅಭಿನಂದಿಸಲಾಯಿತು. ಮೂರು ಮತ್ತು ಮೂರಕ್ಕಿಂತ ಹೆಚ್ಚು ಮಕ್ಕಳ ಪಡೆದ ಕುಟುಂಬದ ದಂಪತಿಗಳನ್ನು ಗೌರವಿಸಲಾಯಿತು.
ಅತಿಥಿಗಳಿಗೆ ಮಲ್ಲಿಗೆ ಗಿಡ ನೀಡಿ ಗೌರವಿಸಲಾಯಿತು.
ಶ್ರೀಮತಿ ಮೈತ್ರಿ ದಿನೇಶ್ ಸ್ವಾಗತಿಸಿ,ಶ್ರೀಮತಿ ವಿಮಲಾ ಶೇಖರ್ ವಂದಿಸಿದರು. ಶ್ರೀಮತಿ ಗಾಯತ್ರಿ ಚಿದಾನಂದ ಕಾರ್ಯಕ್ರಮ ನಿರೂಪಿಸಿದರು.
ಶಾಂತಿ ಮಂತ್ರದೊಂದಿಗೆ ಸಭೆಮುಕ್ತಾಯಗೊಂಡಿತು.
ಗಾಯಕ ಉಮೇಶ್ ಕೋಟ್ಯಾನ್ ವಾಮದಪದವು ಇವರಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು. ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಹೆಚ್ .ಇ ಎಫ್ ನ ಸದಸ್ಯರುಭಾಗವಹಿಸಿದರು. ರಾತ್ರಿ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.







