













ಕೊಡಗು ಸಂಪಾಜೆ ಪೊಲೀಸ್ ಠಾಣೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಎ. ಎಸ್. ಐ ಬೋಪಯ್ಯ ಧ್ವಜಾರೋಹಣವನ್ನು ನೆರವೇರಿಸಿ, ಮಹಾತ್ಮ ಗಾಂಧೀಜಿ , ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ ರಮೇಶ್ ಹೆಚ್. ಕೆ, ಕಾನ್ಸ್ಟೇಬಲ್ ಮಂಜುನಾಥ್ ಬಿ. ಡಿ, ರಾಜೇಂದ್ರ ಕೆ.ಸಿ, ಗ್ರಾಮಸ್ಥರಾದ ಗೋಪಾಲ ಸಂಪಾಜೆ, ಕುಮಾರ್ ಚಿದ್ಕಾರ್, ರಿತಿನ್ ಡೆಮ್ಮಲೆ, ಶಾಲಾ ವಿದ್ಯಾರ್ಥಿಗಳು, ಆಟೋ ಚಾಲಕರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.







