ಆಲೆಟ್ಟಿ ಯುವಕ ಮಂಡಲದಲ್ಲಿ ಸ್ವಾತಂತ್ರ್ಯೋತ್ಸವ

0

ಆಲೆಟ್ಟಿ ಯುವಕ ಮಂಡಲದ ವತಿಯಿಂದ 80 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆ.15 ರಂದು ಆಚರಿಸಲಾಯಿತು.

ಹಿರಿಯರು ಪ್ರಗತಿಪರ ಕೃಷಿಕರಾದ ಅಚ್ಚುತ ಮಣಿಯಾಣಿ ಆಲೆಟ್ಟಿ ಯವರು ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಸುಂದರ ಆಲೆಟ್ಟಿ, ವಿಜಯ್ ಕುಮಾರ್ ಆಲೆಟ್ಟಿ, ಲತೀಶ್ ಗುಂಡ್ಯ, ಶ್ರೀಮತಿ ಗೌರಿ ಶಂಕರ ಆಲೆಟ್ಟಿ, ಗಣೇಶ ಆಲೆಟ್ಟಿ, ಪಂಚಾಯತ್ ಸಿಬ್ಬಂದಿಗಳಾದ ಸುಂದರ, ಸೀತಾರಾಮ ಮೊರಂಗಲ್ಲು, ನೇತ್ರಾವತಿ ಆಲೆಟ್ಟಿ ಹಾಗೂ ಯುವಕಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರವೀಣ್ ಆಲೆಟ್ಟಿ ವಂದಿಸಿದರು.