ಕರಿಂಬಿಲ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0


ಎಡಮಂಗಲ ಗ್ರಾಮದ ಕರಿಂಬಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೮೦ ನೇ ಸ್ವಾತಂತ್ರ್ಯೋತ್ಸವವು ನಡೆಯಿತು. ಶಾಲೆಯ ಎಸ್ ಡಿ ಎಸ್ ಸಿ ಅಧ್ಯಕ್ಷ ವಸಂತ ಕುಕ್ಕಯಕೋಡಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಊರಿನ ವಿದ್ಯಾಭಿಮಾನಿಗಳು, ಮಕ್ಕಳ ಪೋಷಕರು, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ನಂತರ ನಡೆದ ಸಭಾ ಕಾರ್ಯದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಪರಮೇಶ್ವರ ಮನೋಳಿತ್ತಾಯರು, ಅಬ್ದುಲ್ ಕುಂಞ ಕಜೆ, ಶ್ರೀಮತಿ ರೇವತಿ ಎಂಜೀರುರವರು ದಿನದ ವಿಶೇಷದ ಕುರಿತು ಮಾತನಾಡಿದರು. ಮಕ್ಕಳು ಸ್ವಾತಂತ್ರ್ಯ ದಿನಾಚರಣೆ ಕುರಿತಾಗಿ ಭಾಷಣ ಮಾಡಿದರು. ದೇಶಭಕ್ತಿ ಗೀತೆಯನ್ನು ಹಾಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭುವನ ಬಿ.ಆರ್. ಕಾರ್ಯಕ್ರಮ ನಿರ್ವಹಿಸಿದರು.