













ಕೂತ್ಕುಂಜ ಶಿವಾಜಿ ಯುವಕ ಮಂಡಲದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ಲು ಧ್ವಜಾರೋಹಣ ಗೈದರು, ದಿವಾಕರ ಬಿಳಿಮಲೆ ಶುಭ ಹಾರೈಸಿದರು. ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗಿಶ್ ಜಿದ್ಗಲ್ಲು, ಯುವಕ ಮಂಡಲದ ಸದಸ್ಯರು, ಸಲಹೆಗಾರರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಯುವಕ ಮಂಡಲದ ಕಾರ್ಯದರ್ಶಿ ಲಿಖಿತ್ ಅಜ್ಜಿಹಿತ್ಲು ಸ್ವಾಗತಿಸಿದರು ಮತ್ತು ವಂದಿಸಿದರು.








