ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ದ. ಕ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು.

ಗ್ರಾಂ.ಪಂ ಕಾರ್ಯದರ್ಶಿ ತಿರುಮಲೇಶ್ವರ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ , ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸೋಮ ಶೇಖ‌ರ್ ಕೊಯಿಂಗಾಜೆ, ಕೆ. ಪಿ ಜಾನಿ, ಗಣಪತಿ ಭಟ್, ರಾಜ ಗೋಪಾಲ್ ಉಳುವಾರು, ನಾಗೇಶ್ ಪೇರಾಲು, ಪ್ರಮೀಳಾ ಪೆಲ್ತಡ್ಕ, ಗ್ರಾಂ.ಪಂ ಸದಸ್ಯರಾದ ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಯಮುನಾ, ಸುಶೀಲಾ, ಅನುಪಮಾ, ರಜನಿ ಶರತ್ ಬಿ. ಜಗದೀಶ್ ರೈ , ಅಬುಸಾಲಿ ಗೂನಡ್ಕ, ಶ್ರೀಧರ ಕೆ ಕೆ , ಜಗದೀಶ್ ಗೂನಡ್ಕ , ಲಯನ್ ಗಿರೀಶ್ ಕೆ , ಮಂಜುನಾಥ್, ಕೃಷ್ಣ ಪ್ರಸಾದ್ ಕಾಪಿಲ, ರತನ್ ಕೈಪಡ್ಕ, ಭರತ್ ,ಉಮೇಶ್ , ವಿಜಯ , ಉಷಾ, ಭಾರತಿ , ಜಗದೀಶ್ ಗೂನಡ್ಕ , ಗೋಪಮ್ಮ , ಮಧುರಾ, ಸಂಜೀವಿನಿ ಒಕ್ಕೂಟ ಸದಸ್ಯರು, ಗ್ರಾಂ.ಪಂ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಸಿಹಿ ತಿಂಡಿ ವಿತರಣೆ ನಡೆಯಿತು. ಮಾಜಿ ಗ್ರಾಂ.ಪಂ ಉಪಾಧ್ಯಕ್ಷ ಎಸ್‌.ಕೆ ಹನೀಫ್ ಸರ್ವರನ್ನು ಸ್ವಾಗತಿಸಿ, ಮಾಜಿ ಗ್ರಾಂ.ಪಂ ಅಧ್ಯಕ್ಷ ಜಿ.ಕೆ ಹಮೀದ್ ವಂದಿಸಿದರು.