ಹಿರಿಯರ ತ್ಯಾಗ, ಬಲಿದಾನವನ್ನು ನೆನಪಿಸುವಂತಾಗಬೇಕು – ಸದಾನಂದ ಮಾವಜಿ
ಬಂಗ್ಲೆಗುಡ್ಡೆ ಐತಿಹಾಸಿಕ ಸ್ಥಳವಾಗಬೇಕು – ಚಂದ್ರಕೋಲ್ಚಾರ್















ಐತಿಹಾಸಿಕ ಸ್ಥಳವಾದ ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯು ಗ್ರಾಮ ಪಂಚಾಯತ್ ಬೆಳ್ಳಾರೆ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,ಅಮರ ಸುಳ್ಯ ಸಮರ ಸಮಿತಿ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆ.15 ರಂದು ನಡೆಯಿತು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಧ್ವಜಾರೋಹಣ ನೆರವೇರಿಸಿ ಬಂಗ್ಲೆಗುಡ್ಡೆ ಐತಿಹಾಸಿಕ ಸ್ಥಳದ ಮಹತ್ವದ ಬಗ್ಗೆ ಮಾತನಾಡಿದರು.

ಅಮರ ಸುಳ್ಯ ಸಮರ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಕೋಲ್ಚಾರ್ ರವರು 80 ನೇ ಸ್ವಾತಂತ್ರ್ಯೋವ ಹಾಗೂ ಬಂಗ್ಲೆಗುಡ್ಡೆ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡಿದರು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಆರೀಫ್ ಬಿ.ಎಂ.ಸ್ವಾತಂತ್ರ್ಯೋತ್ಸವ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಲೆಕ್ಕಸಹಾಯಕಿ ಶ್ರೀಮತಿ ಸುಶೀಲ , ಬೆಳ್ಳಾರೆ ಕೆಪಿಎಸ್ ಪ್ರಾಂಶುಪಾಲ ಜನಾರ್ಧನ ಕೆ.ಎನ್, ಕೆಪಿಎಸ್ ಶಾಲಾ ವಿದ್ಯಾರ್ಥಿಗಳು, ಎಂ.ಮಾಧವ ಗೌಡ ಕಾಮಧೇನು,ಉಮೇಶ್ ಕೆ.ಎಂ.ಬಿ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪದಾಧಿಕಾರಿಗಳು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು,ಗ್ರಾಮಸ್ಥರು ಉಪಸ್ಥಿತರಿದ್ದರು. ಮುಸ್ತಾಫ ಬೆಳ್ಳಾರೆ ಸ್ವಾತಂತ್ರ್ಯೋತ್ಸವದ ಬಗ್ಗೆ ಕವನ ವಾಚಿಸಿದರು. ಕೂಸಪ್ಪ ಗೌಡ ಮುಗುಪ್ಪುರವರು ಸ್ವಾಗತಿಸಿದರು.







