ಅರಂತೋಡು ಗ್ರಾಮ ಪಂಚಾಯತ್ ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

0

ಅರಂತೋಡು ಗ್ರಾಮ ಪಂಚಾಯತ್ ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪೂರ್ವಾಹ್ನ 10.30 ಕ್ಕೆ ಸರಿಯಾಗಿ ನಡೆಸಲಾಯಿತು. ಧ್ವಜಾರೋಹಣವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಮ್ ಆರ್ ಇವರು ನಡೆಸಿದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಸದಸ್ಯರಾದ ವೆಂಕಟರಮಣ ಪೆತ್ತಾಜೆ, ಪುಷ್ಪಾದರ ಕೆ ಜೆ, ಕೃಷಿ ಪತ್ತಿನ ಸಹಕಾರಿ ಸಂಘದ ಶ್ರೀನಿಧಿ, ಪಾವನ, ಅಂಕಿತ್, ಸುಧಾಕರ, ಕುಸುಮಾದರ, ಪ್ರಭಾಕರ, ಮೇದಪ್ಪ ಗೌಡ, ಯುಎಸ್ ನಂದಕುಮಾರ್, ಸುಂದರ ಬಾಜಿನಡ್ಕ, ಶ್ರೀನಾಥ್ ಮಲ್ಲಡ್ಕ, ಶ್ರೀಕಾಂತ್, ಸಂಜೀವಿನಿ ಒಕ್ಕೂಟದ ಸುಮತಿ ಮಂಜುಳಾ, ಗ್ರಾಮ ಪಂಚಾಯತಿ ಸಿಬ್ಬಂದಿ ಗಳು, ಘನ ತ್ಯಾಜ್ಯ ಘಟಕದ ಸಿಬ್ಬಂದಿಗಳು ಮತ್ತು ಗ್ರಂಥಾಲಯ ಮೇಲ್ವಿಚಾರಕಿ ಉಪಸ್ಥಿತರಿದ್ದರು.