














ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 80ನೇ ಸ್ವಾತಂತ್ರೋತ್ಸವ ಇಂದು ಆಚರಿಸಲಾಯಿತು.
ಸಂಘದ ಆಡಳಿತ ಮಂಡಳಿಯ ನಿರ್ದೇಶಕಿ ಶ್ರೀಮತಿ ವೇದಾವತಿ ಮುಳ್ಳುಬಾಗಿಲು ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕಟ್ಟೆಮನೆ, ಉಪಾದ್ಯಕ್ಷರಾದ ಗಣೇಶ್ ಭಟ್ ನಿರ್ದೇಶಕರುಗಳಾದ ರೇಗನ್ ಶೆಟ್ಟಿಯಡ್ಕ, ಶೇಷಪ್ಪ ಕಿರಿಭಾಗ, ಹಿಮ್ಮತ್ ಕಿರಿಭಾಗ, ಗೋಪಾಲಕೃಷ್ಣ , ಡ್ಯಾನಿ ಎಲದಾಳು, ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ತೀರ್ಥಕುಮಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.







