ಚೆಂಬು: ದಬ್ಬಡ್ಕದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ), ಸಂಪಾಜೆ ವಲಯದ ಯು.ಚೆಂಬು ಒಕ್ಕೂಟದ ವತಿಯಿಂದ ದಬ್ಬಡ್ಕ – ಕಾಂತುಬೈಲುನಲ್ಲಿ ಪುನರ್ ನಿರ್ಮಾಣವಾಗುತ್ತಿರುವ ಶ್ರೀ ದೇವಿ ಭಜನಾ ಮoದಿರದ ಪರಿಸರದಲ್ಲಿ ಶ್ರದಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವು ಆ. ೦೯ ರಂದು ನಡೆಯಿತು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷರಾದ ಮನೋರಮಾ ಬೊಳ್ತಾಜೆ, ಭಜನಾ ಮಂಡಳಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಭುವನೇಶ್ವರ ಕೊಪ್ಪ, ಆಡಳಿತ ಮಂಡಳಿ ಅಧ್ಯಕ್ಷರಾದ ಹೇಮಾಧರ ಹೊಸೂರು, ಸೇವಾಪ್ರತಿನಿಧಿ ಆರತಿ, ಚೆಂಬು ಗ್ರಾಮ ಪಂಚಾಯತಿನ ಮಾಜಿ ಸದಸ್ಯರು ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಗಿರೀಶ್ ಹೊಸೂರು, ಒಕ್ಕೂಟದ ಪದಾಧಿಕಾರಿಗಳು, ಆಡಳಿತ ಮಂಡಳಿಯ ಸದಸ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು.