ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ

0

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಇಂದು ಆಚರಿಸಲಾಯಿತು. ಧ್ವಜಾರೋಹಣವನ್ನು ಮಾಜಿ ಸೈನಿಕರಾದ ಪದ್ಮನಾಭ ಗೌಡ ಗೋಳ್ಯಾಡಿ ಮಾಡಿದರು. ಈ ಸಂದರ್ಭದಲ್ಲಿ ಪಿಡಿಒ ಚೆನ್ನಪ್ಪ ನಾಯ್ಕ, ಬಂಗ್ಲೆಗುಡ್ಡೆ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ, ಬಂಗ್ಲೇಗುಡ್ಡೆ ಶಾಲಾ ಮಕ್ಕಳು, ಲಕ್ಷ್ಮೀಶ ಶಿರೂರು, ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ, ಕುಶಾಲಪ್ಪ ಬಂಬಿಲ, ಸಂಜಿವಿನಿ ಒಕ್ಕೂಟದ ವಿಮಲಾಕ್ಷಿ ಗೋಳ್ಯಾಡಿ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.