













ಅಲ್ ಅಮೀನ್ ಯೂತ್ ಸೆಂಟರ್. ರಿ. ಪೈಚಾರ್ ಇದರ ವತಿಯಿಂದ 80ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮವು ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಕಛೇರಿಯ ಮುಂಭಾಗದಲ್ಲಿ ಅಗಸ್ಟ್ 15 ದಂದು ನಡೆಯಿತು. ಬದ್ರಿಯಾ ಜುಮಾ ಮಸೀದಿ ಖತೀಬರಾದ ಮುನೀರ್ ಸಹದಿ ಅಲ್ ಅರ್ಷದಿಯವರು ದುಹ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಸಾಂದರ್ಭಿಕವಾಗಿ ಮಾತನಾಡಿದರು.

ಧ್ವಜಾರೋಹಣವನ್ನು ಅಲ್ ಅಮೀನ್ ಯೂತ್ ಸೆಂಟರ್ ಇದರ ಅಧ್ಯಕ್ಷರಾದ ಮುನೀರ್ ಪಿಕೆಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ಪೈಚಾರ್ ಇದರ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಪಿ, ಜಮಾಹತ್ ಕಾರ್ಯದರ್ಶಿ ಅಬ್ದುಲ್ ರಹಮಾನ್ , ಬಿಜೆಎಮ್ ಕೋಶಾಧಿಕಾರಿಗಳಾದ ಹನೀಫ್ ಬಿಎಚ್., ಜಾಲ್ಸುರು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಮುಜೀಬ್ ಪೈಚಾರ್, ಎವೈಸಿ ಮಾಜಿ ಅಧ್ಯಕ್ಷರಾದ ಸತ್ತಾರ್ ಪೈಚಾರ್, ಎವೈಸಿ ಕೋಶಾಧಿಕಾರಿಗಳಾದ ಹನೀಫ್ ಅಲ್ಫಾ, ಖುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ ಇದರ ಸದರ್ ಮುಅಲ್ಲಿಮರಾದ ಫೈಝಲ್ ಸಖಾಫಿ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷರಾದ ಡಾ .ಬಶೀರ್ ಆರ್ ಬಿ, ಮುಹಲ್ಲಿಮ್ ಗಳಾದ ಹನೀಫ್ ಮದನಿ ಮಂಡೆಕೋಲು, ಸಾಬೀತ್ ಫಾಳಿಲಿ , ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಉಪಾಧ್ಯಕ್ಷರಾದ ಆಶ್ರಫ್, ಪೈಚಾರ್ ಹಾಗೂ ಅಲ್ ಯೂತ್ ಸೆಂಟರ್ ಪೈಚಾರ್ ಇದರ ಎಲ್ಲಾ ಸದಸ್ಯರುಗಳು ಹಾಗೂ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಎಲ್ಲಾ ಸದಸ್ಯರುಗಳು, ಸ್ಥಳೀಯರು ಭಾಗವಹಿಸಿದ್ದರು.

ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಕಾರ್ಯದರ್ಶಿ ಅಬ್ದುಲ್ ಸಲಾಮ್ ಪಿಎಸ್ ಇವರು ಸ್ವಾಗತಿಸಿ , ಮಾಜಿ ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಕೆಪಿ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.







