ಗೂನಡ್ಕ: ಭವ್ಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಮರಸ್ಯದ ಸಂದೇಶ

0

ಗೂನಡ್ಕ: ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ರವರು ಧ್ವಜಾರೋಹಣ ಮಾಡಿ. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು ಸ್ಥಳೀಯ ಖತೀಬರಾದ
ಅಶ್ರಫ್ ಸಖಾಫಿ ಅಲ್ ಮಳ್ಹರಿ ಅವರು ಮಾತನಾಡಿ: “1947ರ ಮಧ್ಯರಾತ್ರಿ ನಮಗೆ ಸ್ವಾತಂತ್ರ್ಯ ಲಭಿಸಿದೆಯಾದರೂ, ಇದರ ಹಿಂದೆ 200 ವರ್ಷಗಳ ಸುದೀರ್ಘ ಹೋರಾಟದ ಫಲವಿದೆ. ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರ ಲೂಟಿಯ ವಿರುದ್ಧ ನಮ್ಮ ದೇಶದ ವೈವಿಧ್ಯಮಯ ಜಾತಿ, ಮತ, ಪಂಗಡ ಹಾಗೂ ವರ್ಣಭೇದವಿಲ್ಲದ ಸಾಮರಸ್ಯದ ಬದುಕು ನಮ್ಮ ಬಲವಾಗಿತ್ತು.” ಅಧ್ಯಕ್ಷತೆ ವಹಿಸಿದ್ದ ಮುಹಮ್ಮದ್ ಕುಂಞಿ ಗೂನಡ್ಕ ಮಾತನಾಡಿ: ಈ ಭವ್ಯ ಮಸೀದಿಯು ಕೇವಲ ಆರಾಧನಾಲಯ ಮಾತ್ರವಲ್ಲ, ಸೌಹಾರ್ದತೆಯ ಸಂಕೇತವಾಗಿದೆ. ಮಸೀದಿಗೆ ಜಾಗವನ್ನು ದಾನವಾಗಿ ನೀಡಿದ ದಿವಂಗತ ಡಾ. ಕೀಲಾರು ಗೋಪಾಲಕೃಷ್ಣಯ್ಯ ಅವರನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪೂರ್ವಿಕರ ಕೊಡುಗೆ ಮತ್ತು ಇಂದಿನ ದಿನಗಳಲ್ಲಿ ಸಹಬಾಳ್ವೆಯ ಅನಿವಾರ್ಯತೆಯನ್ನು ಅವರು ಎತ್ತಿಹಿಡಿದರು. ಕಾರ್ಯಕ್ರಮಕ್ಕೆ ಹಾರಿಸ್ ಸಹದಿ ಶುಭ ಹಾರೈಸಿದರು.

ಪ್ರಬಂಧ ಮಂಡನೆ:
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪ್ರತ್ಯೇಕವಾಗಿ ಉಲೇಮಾಗಳ ಹಾಗೂ ಸೂಫಿ ಸಂತರ ಪಾತ್ರ” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದರು.

ವೇದಿಕೆಯಲ್ಲಿ ಜಮಾಅತ್ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಉಮ್ಮರ್ ಪುತ್ರಿ (ಉಪಾಧ್ಯಕ್ಷರು, ಗೂನಡ್ಕ ಜಮಾಅತ್) ಜಿ. ಎಂ. ಅಬ್ದುಲ್ಲಾ (ಉಪಾಧ್ಯಕ್ಷರು, ಅಲ್ ಅಮೀನ್ ಗೂನಡ್ಕ ಅಲ್ಲದೆ ಕಾರ್ಯಕ್ರಮದಲ್ಲಿ ಡಿ. ಆರ್. ಅಬ್ದುಲ್ ಖಾದರ್ (ಜಮಾಅತ್ ಖಜಾಂಚಿ), ಹಾಜಿ ಪಿ. ಎ. ಅಬ್ದುಲ್ಲಾ (ಮಾಜಿ ಅಧ್ಯಕ್ಷರು), ಇಬ್ರಾಹಿಂ ಗೂನಡ್ಕ (ಹಿರಿಯ ನಿವೃತ್ತ ಸರ್ಕಾರಿ ಅಧಿಕಾರಿ), ಹಾಜಿ ಜಿ ಅಬ್ಬಾಸ್ ಅಲ್ಲದೆ ಹಾಗೂ ಮದ್ರಸಾ ವಿದ್ಯಾರ್ಥಿಗಳು, ವಿವಿಧ ಸುನ್ನಿ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ದೇಶಪ್ರೇಮ, ಸ್ನೇಹ ಮತ್ತು ದೇಶ ರಕ್ಷಣೆಯ ಪ್ರತಿಜ್ಞಾ ವಿಧಿ ನೆರವೇರಿಸಲಾಯಿತು. ಗೂನಡ್ಕ ಟ್ರೇಡರ್ಸ್ ಮಾಲಕರಾದ ರಂಜನ್ ಕಲ್ಲಗೆದ್ದೆ ಅವರು ಸಿಹಿ ತಿಂಡಿ ನೀಡಿ ಸಹಕರಿಸಿದರು. ಜಮಾಅತ್ ಕಾರ್ಯದರ್ಶಿ ಅಝರ್ ಚೇರೂರ್ ಸ್ವಾಗತಿಸಿ ಪ್ರದಾನ ಕಾರ್ಯದರ್ಶಿ ಅಶ್ರಪ್ ಎಸ್ ಎ ವಂದಿಸಿದರು.