














ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಮತ್ತು ಮೆಸ್ಕಾಂ ಇಲಾಖೆ ಬೆಳ್ಳಾರೆ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಆ.15 ರಂದು ನಡೆಯಿತು.
ಮೆಸ್ಕಾಂ ಇಂಜಿನಿಯರ್ ಪ್ರಸಾದ್ ಕತ್ಲಡ್ಕ ಮತ್ತು ರೋಟರಿ ಕ್ಲಬ್ ಅಧ್ಯಕ್ಷ ಆರೀಫ್ ಬಿ.ಎಂ.ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರೊ.ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತುರವರು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು. ಮೆಸ್ಕಾಂ ಲೈನ್ ಮೆನ್ ದಿನೇಶ್ ದೇರಾಜೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರೋಟರಿ ಪದಾಧಿಕಸರಿಗಳು,ಸದಸ್ಯರು,ಮೆಸ್ಕಾಂ ಸಿಬ್ಬಂದಿಗಳು,ಲೈನ್ ಮೆನ್ ಗಳು ಉಪಸ್ಥಿತರಿದ್ದರು.







