













ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಕುಕ್ಕುಜಡ್ಕದಲ್ಲಿ 80ನೇ ಸ್ವಾತಂತ್ರೋತ್ಸವವನ್ನು ಆ.15 ರಂದು ಆಚರಿಸಲಾಯಿತು. ಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ನಿರಂಜನ ಕೋಡ್ತುಗುಳಿ ಯವರು ಧ್ವಜಾರೋಹಣ ಗೈದು ಶುಭ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಹಾತ್ಮಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸುಪ್ರೀತ್ ಮೊಂಟಡ್ಕ, ಉಪಾಧ್ಯಕ್ಷ ಅರುಣ ನಾಯರ್ ಕಲ್ಲು, ಕಾರ್ಯದರ್ಶಿ ತೇಜಸ್ವಿ ಕಡಪಳ, ನಿರ್ದೇಶಕರಾದ ಮಹೇಶ್ ಮೇರ್ಕಜೆ, ಮಾಯಿಲಪ್ಪ ಸಂಕೇಶ, ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸತೀಶ್ ಆಚಾರ್ಯ ಹಾಗೂ ಉಪಾಧ್ಯಕ್ಷ ದೀಕ್ಷಾ ದೊಡ್ಡಿಹಿತ್ಲು, ಚೊಕ್ಕಾಡಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸಂಕೀರ್ಣ ಚೊಕ್ಕಾಡಿ ಹಾಗೂ ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿ ಭವ್ಯ ಪಿ, ಪ್ರಕಾಶ ಮಾಯಿಪಡ್ಕ, ಶಾಲಾ ಶಿಕ್ಷಕ ವೃಂದದವರು, ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.







