ಮಾನ್ಯಡ್ಕ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯೋತ್ಸವ

0

ಮುರುಳ್ಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾನ್ಯಡ್ಕದಲ್ಲಿ ನೇ ಸ್ವಾತಂತ್ರ್ಯೋತ್ಸವವು ನಡೆಯಿತು. ಶಾಲೆಯ ಎಸ್ ಡಿ ಎಸ್ ಸಿ ಅಧ್ಯಕ್ಷ ಆನಂದ ಯಂ.ರವರು ಧ್ವಜಾರೋಹಣ ನೆರವೇರಿಸಿದರು.


ನಂತರ ನಡೆದ ಸಭಾ ಕಾರ್ಯದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಊರಿನ ಹಿರಿಯರಾದ ಶೇಷಪ್ಪ ಗೌಡ ಹಾಗೂ ಕೃಷ್ಣಪ್ಪ ಗೌಡ ಮಾನ್ಯಡ್ಕ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಹೇಶ್ ಆಲಾಜೆ, ನವೋದಯ ಗೆಳೆಯರ ಬಳಗ ಮಾನ್ಯಡ್ಕದ ಅಧ್ಯಕ್ಷ ಪ್ರಕಾಶ್ ಮಾನ್ಯಡ್ಕ ಉಪಸ್ಥಿತರಿದ್ದರು.
ದತ್ತಿನಿಧಿ ಕೊಡುಗೆ, ಕಂಪ್ಯೂಟರ್ ಹಾಗೂ ಪ್ರಿಂಟರ್ ಹಸ್ತಾಂತರ ಕಾರ್ಯಕ್ರಮಗಳು ನೆರವೇರಿದವು. ಮಕ್ಕಳು ಸ್ವಾತಂತ್ರ್ಯ ದಿನಾಚರಣೆ ಕುರಿತಾಗಿ ಭಾಷಣ, ದೇಶಭಕ್ತಿ ಗೀತೆ, ನೃತ್ಯ ಮತ್ತಿತರ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಊರಿನ ವಿದ್ಯಾಭಿಮಾನಿಗಳು, ಮಕ್ಕಳ ಪೋಷಕರು, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಬಿಶ್ವಜಿತ್ ಸ್ವಾಗತಿಸಿದರು.
ಮುಖ್ಯಶಿಕ್ಷಕರಾದ ಶ್ರೀಮತಿ ಅಮೃತ ದಿನದ ವಿಶೇಷದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಶ್ರೀನಿಧಿ ವಂದಿಸಿದರು. ವಿದ್ಯಾರ್ಥಿ ನಾಯಕ ಮೋನಿಶ್ ನಿರೂಪಣೆ ಮಾಡಿದರು.