ಅಜ್ಜಾವರ ಗ್ರಾ.ಪಂ. ಸದಸ್ಯ ಸೋಮನಾಥ ಮುಳ್ಯಕಜೆ ಹೃದಯಾಘಾತದಿಂದ ನಿಧನ

0

ಅಜ್ಜಾವರ ‌ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಮುಳ್ಯಕಜೆ‌ ನಿವಾಸಿ ಸೋಮನಾಥರವರು ಹೃದಯಾಘಾತದಿಂದ ಸುಳ್ಯದ ಆಸ್ಪತ್ರೆಯಲ್ಲಿ ಆ.22ರಂದು ನಿಧನರಾದರು.

ಸಂಜೆ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತೆಂದೂ, ರಾತ್ರಿ ಯಾಗುತ್ತಲೇ ನೋವು ಹೆಚ್ಚಾಗಿ ಮನೆಯವರು ಸುಳ್ಯದ ಆಸ್ಪತ್ರೆಗೆ ‌ಕರೆದುಕೊಂಡು ಬಂದರಾದರೂ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಮುಳ್ಯಕಜೆ ಪರಿಸರದ ಎಲ್ಲ ಕಾರ್ಯಕ್ರಮಗಳಿಗೆ ನಾಯಕತ್ವ ವಹಿಸುತ್ತಿದ್ದ ಸೋಮನಾಥರು ಅಲ್ಲಿಯ ಸತ್ಯಪದಿನಾಜಿ, ಕೊರಗಜ್ಜ, ್ಉಳಿಗ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಮುಂಚೂಣಿಯಲ್ಲಿದ್ದರು.

ಮೃತರು ಪತ್ನಿ ವಾರಿಜ, ಪುತ್ರರಾದ ಪ್ರವೀಣ ಹಾಗೂ ಪ್ರದೀಪರನ್ನು ಅಗಲಿದ್ದಾರೆ.