ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜಿಲ್ಲಾ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ

0

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 2025-26ನೇ ಸಾಲಿನ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ.

ಮಂಗಳೂರಿನ ಕೇಂದ್ರ ಕಚೇರಿಯ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ಆ.22 ರಂದು ನಡೆದ ಮಹಾಸಭೆಯಲ್ಲಿ ಪ್ರಸ್ತುತ ವರ್ಷದ ಗಣನೀಯ ಸೇವೆಯನ್ನು ಪರಿಗಣಿಸಿ
ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಎನ್.ರವರು ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಉಪಾಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ನಿರ್ದೇಶಕರಾದ ಎಸ್.ಎನ್.ಮನ್ಮಥ ರವರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಉಪಾಧ್ಯಕ್ಷರಾದ ದೇವಿಪ್ರಸಾದ್ ಸುಳ್ಳಿ, ನಿರ್ದೇಶಕರಾದ ಉಮೇಶ್ ಪ್ರಭು, ಜಯಪ್ರಸಾದ್ ಸುಳ್ಳಿ, ಚಂದ್ರಶೇಖರ ಮಂದ್ರಪ್ಪಾಡಿ, ಶ್ರೀಮತಿ ಸಂಧ್ಯಾ ಪುನುಕುಟ್ಟಿ, ಕುಲದೀಪ್ ಹರ್ಲಡ್ಕ, ಹರೀಶ್ ಸುಳ್ಳಿ, ಸಿಬ್ಬಂದಿಗಳಾದ ಜೀವನ್ ಪಿ., ಜೀವನ್ ಟಿ., ನಿಶ್ಚಿತ್, ಪ್ರಶಾಂತ್, ದೇವಕಿ ಕೆ., ಲತಾ ಕೆ. ಉಪಸ್ಥಿತರಿದ್ದರು.