ಸುಳ್ಯದಲ್ಲಿ ರೇಂಜರ್ ಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮಂಜುನಾಥ್ ಎನ್., ಗಿರೀಶ್ ಆರ್., ವಿಮಲ್ ಬಾಬುರಿಗೆ ಬೀಳ್ಕೊಡುಗೆ-ಸ್ನೇಹಕೂಟ

0

ಮೂವರು ಅಧಿಕಾರಿಗಳು ಜನಸ್ನೇಹಿಯಾಗಿದ್ದರು : ಗಣ್ಯರ ಶುಭನುಡಿ

ಸುಳ್ಯದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ರೇಂಜರ್ ಮಂಜುನಾಥ್ ಎನ್., ಸುಬ್ರಹ್ಮಣ್ಯದಲ್ಲಿ ರೇಂಜರ್ ಆಗಿದ್ದು ವರ್ಗಾವಣೆಗೊಂಡಿರುವ ವಿಮಲ್ ಬಾಬುರಿಗೆ ಬೀಳ್ಕೊಡುಗೆ ಹಾಗೂ ವರ್ಷದ ಹಿಂದೆ ಪಂಜದಲ್ಲಿ ರೇಂಜರ್ ಆಗಿದ್ದು ಎ.ಸಿ.ಎಫ್. ಪದೋನ್ನತಿಗೊಂಡು ಕೋಲಾರದಲ್ಲಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಆರ್. ರಿಗೆ ಅಭಿನಂದನಾ ಸಮಾರಂಭ ಆ.22ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ವಹಿಸಿದ್ದರು.

ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ಅಭಿನಂದನಾ ಭಾಷಣಗೈದರು.

ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ನಿತ್ಯಾನಂದ‌ ಮುಂಡೋಡಿ, ಜಿ.ಪಂ. ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು, ಸುಳ್ಯ ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ಸೂಡಾ ಅಧ್ಯಕ್ಷರಾದ ಕೆ.ಎಂ.ಮುಸ್ತಫಾ, ಉದ್ಯಮಿ ಎಂ.ಬಿ.ಸದಾಶಿವ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ.ನಿತಿನ್ ಪ್ರಭು, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ ಶುಭಹಾರೈಸಿ “ಸುಳ್ಯ ತಾಲೂಕಿನಲ್ಲಿ ಸೇವೆ ಸಲ್ಲಿಸಿರುವರುವ ಮೂವರು ಅಧಿಕಾರಿಗಳು ಕೂಡಾ ಜನಸ್ನೇಹಿಯಾಗಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಮಾನವೀಯತೆಯೊಂದಿಗೆ ಜನರು ಮೆಚ್ಚುವಂತೆ ಸೇವೆ ಸಲ್ಲಿಸಿದ್ದಾರೆ” ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್.ಮಂಜುನಾಥರು ನಾನು ಸುಳ್ಯ ತಾಲೂಕಿನಲ್ಲಿ 13 ವರ್ಷಗಳ‌ ಕಾಲ ಸೇವೆ ಸಲ್ಲಿಸಿದ್ದೇನೆ.‌ ಎಲ್ಲಿಂದಲೋ ಬಂದ ನನ್ನನ್ನು ಇಲ್ಲಿಯ ಜನರು ತಮ್ಮವಂತೆ‌ ನೋಡಿಕೊಂಡು ನನ್ನ ಕೆಲಸಗಳಿಗೆ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು” ಎಂದರು.

ಸುಳ್ಯ ರೇಂಜರ್ ನಿರಂಜನ್ ಶೆಟ್ಟಿ ವೇದಿಕೆಯಲ್ಲಿದ್ದರು.

ಡಿ.ಆರ್.ಎಫ್.ಒ.ಗಳಾದ ವೆಂಕಟೇಶ್, ಕರಣಿಮಠ, ರಾಘವೇಂದ್ರ ಪ್ರಸಾದ್, ಚಂದ್ರು, ಶ್ರೀಮತಿ ಸೌಮ್ಯ, ರಾಜೇಶ್ ಮಾವಿನಕಟ್ಟೆ, ಸಂಪಾಜೆ ಸಹಕಾರ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ, ಶಶಿಧರ್ ಎಂಜೆ., ಮರದ ವ್ಯಾಪಾರಿ ಫಾರೂಕ್ ಸಂಟ್ಯಾರ್ ಅನಿಸಿಕೆ ವ್ಯಕ್ತಪಡಿಸಿದರು.

ಹರೀಶ್ ರೈ ಉಬರಡ್ಕ ವಂದಿಸಿದರು. ಫಾರೆಸ್ಟರ್ ಸೌಮ್ಯ‌ ಕಾರ್ಯಕ್ರಮ ನಿರೂಪಿಸಿದರು.