













ಸಾರ್ವಜನಿಕ ಶ್ರೀ ವರಮಹಾಪೂಜಾ ಸಮಿತಿ ಕೊಡಿಯಾಲಬೈಲು ಇವರ ನೇತೃತ್ವದಲ್ಲಿ ವರಲಕ್ಷ್ಮೀ ಯುವತಿ ಮಂಡಲ (ರಿ) ಕೊಡಿಯಾಲಬೈಲು, ಎಂ.ಜಿ.ಎಂ ಶಾಲಾ ಪೋಷಕರ ಸಮಿತಿ ಮತ್ತು ಶ್ರೀ ವಿಷ್ಣು ಯುವಕ ಮಂಡಲ (ರಿ.) ಕೊಡಿಯಾಲಬೈಲು ಹಾಗೂ ಶ್ರೀ ಮಹಮ್ಮಾಯಿ ಸೇವಾ ಸಮಿತಿ (ರಿ.) ಕೊಡಿಯಾಬೈಲು ಇವುಗಳ ಸಹಯೋಗದೊಂದಿಗೆ 3ನೇ ವರ್ಷದ ಸಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.28ರಂದು ಗೌಡ ಸಮುದಾಯಭವನ, ಕೊಡಿಯಾಲಬೈಲು ಸುಳ್ಯ ಇಲ್ಲಿ ಸಂಜೆ 5 ಗಂಟೆಯಿ0ದ ನಡೆಯಲಿದೆ.
ಪೂಜೆ ಮಾಡುವವರು ರೂ.150 ನ್ನು ನೀಡಿ ರಶೀದಿ ಪಡೆದುಕೊಳ್ಳುವುದು, ಪೂಜೆಗಾಗಿ ತುಳಸಿ, ಹಿಂಗಾರ, ಕೇಪುಳ ಹಾಗೂ ಹಣ್ಣುಕಾಯಿ ತರುವುದು, ಪೂಜೆ ಮಾಡುವವರು ವೃತ ಆಚರಣೆಯೊಂದಿಗೆ, ಶುಭ್ರ ವಸ್ತ್ರದಲ್ಲಿ ತಮ್ಮ ಮನೆಯವರ ನಕ್ಷತ್ರ-ರಾಶಿ ಫಲಗಳನ್ನು ನೆನಪಿನಲ್ಲಿಡುವುದು, 1 ಸೇರು ಬೆಳ್ತಿಗೆ, 4ಬಾಳೆಎಲೆ, ಆಚರ್ನೆಗೆ ಬಿಡಿಹೂವು, 1 ತೆಂಗಿನಕಾಯಿ, 5 ವೀಳ್ಯದೆಲೆ, 1 ಅಡಿಕೆ, 1 ಲೋಟ, ಚಮಚ,1 ರೂ.ನಾಣ್ಯ ತರುವುದು, ಮೇಲಿನ ಪೂಜಾ ಸಾಮಾಗ್ರಿಗಳನ್ನು ತರದಿದಲ್ಲಿ 100 ರೂ. ಕೊಟ್ಟಲ್ಲಿ ಸಮಿತಿಯವರೇ ವ್ಯವಸ್ಥೆ ಮಾಡಲಾಗುವುದು. ಪೂಜೆಗೆ ಊರಿನ ಸಮಸ್ತ ಜನತೆ ಆಗಮಿಸಿ ದೇವರ ಪ್ರಸಾರ ಸ್ವೀಕರಿಸುವಂತೆ ಪೂಜಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.







