













ಮುರುಳ್ಯ ಗ್ರಾಮದ ಹುದೇರಿ ಮನೆತನದ ನಿವೃತ್ತ ಅಂಚೆ ನೌಕರ ಹುದೇರಿ ವೆಂಕಪ್ಪ ಗೌಡ ಅಲ್ಪ ಕಾಲದ ಅಸೌಖ್ಯದಿಂದ ಆ. 24ರಂದು ನಿಧನರಾದರು. ಇವರಿಗೆ 67 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ರಾಜೀವಿ ವೆಂಕಪ್ಪ ಗೌಡ, ಪುತ್ರ ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಉದ್ಯೋಗಿ ದೇವಿಪ್ರಸಾದ್ ಹುದೇರಿ, ಸೊಸೆ ಶ್ರೀಮತಿ ನಿಶಾ ದೇವಿಪ್ರಸಾದ್, ಪುತ್ರಿ ಶ್ರೀಮತಿ ದಿವ್ಯಾ ಜೀವನ್ ಕುಮಾರ್ ಕೆ, ಸಹೋದರ ಗೋಪಣ್ಣ ಗೌಡ ಹುದೇರಿ, ಸೇರಿದಂತೆ ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.







