













ಮುಂಗಾರು ವಾಲಿಬಾಲ್ ಅಕಾಡೆಮಿ ಸುಳ್ಯ ಇದರ ವತಿಯಿಂದ ನಡೆದ ತಾಲೂಕು ವಾಲಿಬಾಲ್ ‘ಇಂಡಿಪೆಂಡೆನ್ಸ್ ಡೇ’ ಕಪ್ ನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕಿಯರ ತಂಡವು ಸತತ ಎರಡನೇ ವರ್ಷ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪೈನಲ್ ಪಂದ್ಯದಲ್ಲಿ ಎಸ್.ಎಸ್.ಪಿ.ಯು.ಸಿ. ಸುಬ್ರಹ್ಮಣ್ಯ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ತಂಡದಲ್ಲಿ ಗ್ರೀಷ್ಮ, ಮೇಘ.ಹೆಚ್.ಕೆ,ತನುಶ್ರೀ., ದೀಕ್ಷಿತಾ.ಕೆ,ಸ್ನೇಹ, ಅಭಿದ, ದೀಪಿಕಾ, ಶ್ರೇಯಾ,ಶರಣ್ಯ ತಂಡದಲ್ಲಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಾಲ್ ಏನೆಕಲ್ಲು ತರಬೇತಿ ನೀಡಿರುತ್ತಾರೆ, ಪ್ರಾಂಶುಪಾಲರಾದ ಚೆನ್ನಮ್ಮ, ಉಪನ್ಯಾಸ ವೃಂದ ಸಹಕರಿಸಿದರು.







