ಸುಳ್ಯದ ರಥಬೀದಿಯಲ್ಲಿ ಕಳೆದೆರಡು ದಶಕಗಳಿಂದ ವ್ಯವಹರಿಸುತ್ತಿರುವ ಸ್ವಸ್ತಿಕ್ ಕಂಪ್ಯೂಟರ್ಸ್ ರವರ ವಿಸ್ತೃತ ಲ್ಯಾಪ್ ಟಾಪ್ ಶೋರೂಂ
ಆ.26 ರಂದು ಉದ್ಘಾಟನೆ ಗೊಂಡಿತು.














ನೂತನ ಶೋರೂಂ ನ್ನು ಉದ್ಘಾಟಿಸಿದ ಕಾಸರಗೋಡು ಜಿಲ್ಲೆಯ ನ್ಯಾಯವಾದಿ ಶ್ರೀಕಾಂತ್ ತ್ರಿಕನ್ನಾಡ್ ರವರು ಮಾತನಾಡಿ ” ಸುಳ್ಯದ ಮನೆ ಮಾತಾಗಿರುವ ಸಂಸ್ಥೆ ಗಡಿ ಪ್ರದೇಶವನ್ನು ದಾಟಿ ಪಕ್ಕದ ಕೇರಳದ ಜಿಲ್ಲೆಗೂ ವಿಸ್ತರಿಸಿಕೊಂಡಿದೆ. ಪ್ರಾಮಾಣಿಕತೆಯಿಂದ
ತನ್ನ ಉದ್ಯಮದಲ್ಲಿ ಬದ್ಧತೆಯನ್ನು ಇರಿಸಿಕೊಂಡು ಗ್ರಾಹಕರ ವಿಶ್ವಾಸ ಗಳಿಸಿಕೊಂಡ ಸಂಸ್ಥೆ ಇದಾಗಿದೆ ಎಂದು ಹೇಳಿದರು.

ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ ದೀಪ ಪ್ರಜ್ವಲಿಸಿ” ಸಂಸ್ಥೆ 20 ವರುಷ ಪೂರೈಸಿ ನೂತನ ಹೆಜ್ಜೆಗೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಗ್ರಾಹಕರಿಗೆ ಇದರ ಸದುಪಯೋಗ ಸಿಗುವಂತಾಗಲಿ. ಉತ್ತಮ ಸೇವೆ ಇನ್ನಷ್ಟು ದೊರಕುವಂತಾಗಲಿ ಎಂದುಶುಭ ಹಾರೈಸಿದರು.
ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು ಮಾತನಾಡಿ ” ಬೆಳೆಯುತ್ತಿರುವ ಸುಳ್ಯಕ್ಕೆ ಉತ್ತಮ ಕೊಡುಗೆ ಇದಾಗಿದೆ. ಕಂಪ್ಯೂಟರ್ ಮೊಬೈಲ್ ಆಧುನಿಕ ತಂತ್ರಜ್ಞಾನ ದ ಮೂಲಕ ಗ್ರಾಹಕರಿಗೆ ಸಂತೃಪ್ತ ಸೇವೆ ನೀಡುವ ಮೂಲಕ ಲೋಕಲ್ ಫಾರ್ ವೋಕಲ್ “
ಆನ್ ಲೈನ್ ಖರೀದಿ ದೂರ ಮಾಡಿ ಸ್ಥಳೀಯ ಉದ್ಯಮಕ್ಕೆ ಪ್ರೋತ್ಸಾಹ ನೀಡಿ ಎಂದು ಗ್ರಾಹಕರಲ್ಲಿ ಕರೆ ನೀಡಿದರು.

ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಾಫ ಮಾತನಾಡಿ ” ಸ್ವಸ್ತಿಕ್ ಹೆಸರಿಗೆ ತಕ್ಕಂತೆ ಎಲ್ಲಾ ಗ್ರಾಹಕರಿಗೆ ಒಳಿತು ಮಾಡಿದೆ. ಎಲ್ಲಾ ಗ್ರಾಹಕರ ಜತೆ ಸಮಭಾವನೆಯಿಂದ ವ್ಯವಹಾರ ಮಾಡುವ ವಿಶ್ವಾಸಾರ್ಹ ಸಂಸ್ಥೆಯಾಗಿದೆ ಎಂದು ಹೇಳಿದರು.
ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಕೆ, ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ರವರು ಶುಭ ಹಾರೈಸಿದರು.
ಮಾಲಕರ ತಾಯಿ ಶ್ರೀಮತಿ ಸಾವಿತ್ರಿ ಬೈಪಡಿತ್ತಾಯ ಅಜ್ಜಾವರ, ಮಾಲಕರಾದ ಕೃಷ್ಣರಾಜ್ ಬೈಪಡಿತ್ತಾಯ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಶ್ವೇತಾಕೃಷ್ಣರಾಜ್,
ಕಿರಣ್ ರಾಜ್ ಬೈಪಡಿತ್ತಾಯ ಅಜ್ಜಾವರ ಹಾಗೂ ಸಂಸ್ಥೆಯ ಉದ್ಯೋಗಿಗಳು ಸಹಕರಿಸಿದರು.
ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ಶುಭಾರಂಭದ ಪ್ರಯುಕ್ತ ಪ್ರಸಿದ್ಧ ಬ್ರಾಂಡೆಡ್ ಕಂಪನಿಯ ಆಕರ್ಷಕ ಲ್ಯಾಪ್ ಟಾಪ್ ಗಳು ಆಫರ್ ದರದಲ್ಲಿ ಗ್ರಾಹಕರಿಗೆ ನೀಡಲಾಗುವುದು.
ಪ್ರತಿ ಖರೀದಿಯ ಮೇಲೆ ಉಚಿತಉಡುಗೊರೆಗಳನ್ನು ನೀಡಲಾಗುವುದೆಂದು ಮಾಲಕರು ತಿಳಿಸಿದರು.







