ವಾರಗಳ ಕಾಲ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಇಂದು ಸಮಾರೋಪ
ಇಂದು ಮಠದ ದಿವಾನರಿಂದ ಹಾಗೂ ಅಭಿಮಾನಿಗಳಿಂದ ಶ್ರೀಗಳಿಗೆ ಗೌರವಾರ್ಪಣೆ, ವಯಲಿನ್ ವಾದನ,ದಾಸರ ಪದಗಳ ಗಾಯನ














ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ಶ್ರೀಗಳಾದ ವಿದ್ಯಾಪ್ರಸನ್ನ ಶ್ರೀಗಳ 30 ನೇ ಚಾರ್ತುಮಾಸ್ಯ ಪ್ರಯುಕ್ತ
ಆ,19 ರಂದು ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಸನಾರೋಪ ಆ,26 (ಇಂದು) ನಡೆಯಲಿದೆ.

ಆ.25 ರ ಸಂಜೆ ಮಹಾಭಾರತ, ರಾಮಾಯಣ, ಭಗವದ್ಗೀತೆ, ಭಾಗವತದಲ್ಲಿ ಬರುವ ನೆನಪಿಡಲೇಬೇಕಾದ ವಿಶೇಷ ಘಟನಾವಳಿಗಳುಬಗ್ಗೆ ವಿದ್ಯಾಪ್ರಸನ್ನ ಶ್ರೀಗಳವರಿಂದ ಪ್ರವಚನ ನಡೆಯಿತು.
ಬಳಿಕ ಗಾಯನ ವಾದನ ಕಚೇರಿ
ನಡೆಯಿತು.

ಇಂದು ಸಂಜೆ ಸಾಂಸ್ಕೃತಿಕ ವೈಭವದ ಸಮಾರೋಪ ನಡೆಯಲಿದೆ. ಇದರಲ್ಲಿ ಸಾಂಸ್ಕೃತಿಕ ಸ್ಪರ್ಧೇಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಬಳಿಕ ಮಠದ ದಿವಾನರಿಂದ ಹಾಗೂ ಅಭಿಮಾನಿಗಳಿಂದ ಶ್ರೀಗಳಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಧನಶ್ರೀ ಶಬರಾಯರಿಂದ ವಯಲಿನ್ ವಾದನ ನಡೆದು ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ದಾಸರ ಪದಗಳ ಗಾಯನ ನಡೆಯಲಿವೆ.







