













ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಇದರ ಆಶ್ರಯದಲ್ಲಿ 4 ನೇ ವರ್ಷದ ಮೊಸರು ಕುಡಿಕೆ ಉತ್ಸವವು ಸೆ.13 ರಂದು ಆಲೆಟ್ಟಿಯಲ್ಲಿನಡೆಯಲಿದ್ದುಇದರ ಆಮಂತ್ರಣ ಪತ್ರವನ್ನು ಆ.26 ರಂದು ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಹರ್ಷಿತ್ ಬನ್ನಿಂತಾಯ ರವರು ಪ್ರಾರ್ಥಿಸಿ ಪೂಜೆಯನ್ನು ನೆರವೇರಿಸಿದರು.
ಆಲೆಟ್ಟಿ ಸಹಕಾರಿ ಸಂಘದ ಅಧ್ಯಕ್ಷರು, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾದ ಜಯಪ್ರಕಾಶ್ ಕುಂಚಡ್ಕ ರವರು ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನವೀನ್ ಕುಮಾರ್ ಗುಂಡ್ಯ, ಶ್ರೀಮತಿ ವನಜಾಕ್ಷಿ ಆಲೆಟ್ಟಿ, ಸ್ಥಳೀಯ ಪ್ರಮುಖರಾದ ರಾಧಾಕೃಷ್ಣ ರೈ ಆಲೆಟ್ಟಿ, ಧನಂಜಯ ಕುಂಚಡ್ಕ, ಅಚ್ಚುತ ಮಣಿಯಾಣಿ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ರಾಮಚಂದ್ರ ಆಲೆಟ್ಟಿ, ಜನನಿ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ರಾದ ಲತೀಶ್ ಗುಂಡ್ಯ, ನಿತಿನ್ ಗುಂಡ್ಯ, ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ,ಉತ್ಸವ ಸಮಿತಿ ಕಾರ್ಯದರ್ಶಿ ಶ್ರೀನಾಥ್ ಆಲೆಟ್ಟಿ, ವಿಷ್ಣು ಪ್ರಸಾದ್ ಗುಂಡ್ಯ, ಶ್ರೀಮತಿ ಬೇಬಿ ಆಲೆಟ್ಟಿ, ಪುನೀತ್, ಸುರೇಶ್ ಉಪಸ್ಥಿತರಿದ್ದರು.







