













ಜುಲೈ 2026 ರಲ್ಲಿ ನಡೆದ ಅಖಿಲಭಾರತ ವೃತ್ತಿ ಪರೀಕ್ಷೆಯಲ್ಲಿ ಸುಳ್ಯದ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯು ಶೇಕಡಾ 92 ಫಲಿತಾಂಶದೊಂದಿಗೆ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ.
ಪ್ರಥಮ ವರ್ಷದ ವಿಭಾಗದಲ್ಲಿ 73 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿ 93 ಫಲಿತಾಂಶ ಬಂದಿರುತ್ತದೆ. ದ್ವಿತೀಯ ವರ್ಷದ ವಿಭಾಗದಲ್ಲಿ 58 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿ ಶೇಕಡಾ 90 ಫಲಿತಾಂಶ ಬಂದಿರುತ್ತದೆ. ಒಟ್ಟು 131 ವಿದ್ಯಾರ್ಥಿಗಳಲ್ಲಿ 120 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಸರಾಸರಿ ಶೇಕಡಾ 92 ಫಲಿತಾಂಶ ಬಂದಿರುತ್ತದೆ. ಮಾತ್ರವಲ್ಲದೆ ಈ ವರ್ಷದ ಉದ್ಯೋಗದ ನೇಮಕಾತಿಯಲ್ಲಿ ಶೇಕಡಾ 100ರಷ್ಟು ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಲ್ಲಿ ನೇಮಕಾತಿ ಹೊಂದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.







