













ಅಮರಮೂಡ್ನೂರು ಗ್ರಾಮದ ಪಿಲಿಕಜೆ ಎಂಬಲ್ಲಿ ಅಮಾನವೀಯತೆಯ ನಡೆಯಂತೆ ಆ. 25 ರ ತಡರಾತ್ರಿ ಯಾರೋ ಕಿಡಿಗೇಡಿಗಳು ಆರು ಸಣ್ಣ ನಾಯಿಮರಿಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದಾರೆ.
ತಾಯಿಯಿಂದ ಬೇರ್ಪಟ್ಟ ಸಣ್ಣ ಮರಿಗಳು ಹಸಿವು ಮತ್ತು ಭಯದಿಂದ ಪರದಾಡುತ್ತಿವೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಮೂಕ ಪ್ರಾಣಿಗಳನ್ನು ಬಿಸಾಕಿ ಹೋಗುವ ಮನಸ್ಥಿತಿಯನ್ನು ಸ್ಥಳೀಯರು ಖಂಡಿಸಿದ್ದಾರೆ.







