ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ಪದಗ್ರಹಣ ಸಮಾರಂಭ

0

ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭ ವು ಆ.21 ರಂದು ಮಹಿಳಾ ಮಂಡಲದ ಕಟ್ಟಡ ಆಲೆಟ್ಟಿ ಯಲ್ಲಿ ನಡೆಯಿತು.

ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಎಂ.ಶೆಟ್ಟಿ ಆಲೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷರಾದ ಶ್ರೀಮತಿ ಸುಮನ ಕೃಪಾಶಂಕರ ತುದಿಯಡ್ಕ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನ ನೆರವೇರಿಸಿದರು.
ನಿರ್ಗಮನಾಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಯವರಿಂದ ಮುಂದಿನ ಸಾಲಿನ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ತಂಡಕ್ಕೆ ಅಧಿಕಾರ ಹಸ್ತಾಂತರ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಸಹಕಾರಿ ಸಂಘದ ಸಿ.ಇ.ಒ ಶ್ರೀಮತಿ ಶಕುಂತಳ ಕೃಷ್ಣನ್, ಗೌರವಾಧ್ಯಕ್ಷ ರಾದ ಶ್ರೀಮತಿ ಯಶೋಧ ಕುಡೆಕಲ್ಲು, ಖಜಾಂಜಿ ಶ್ರೀಮತಿ ಸರೋಜಿನಿ ಬಾರ್ಪಣೆ, ಕಾರ್ಯದರ್ಶಿ ಶೋಭಾ ಗುಂಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಯಶೋಧ ಗುಂಡ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಶೋಭಾ ಯೊಗೀಶ್ ಗುಂಡ್ಯ ಸ್ವಾಗತಿಸಿದರು. ಶ್ರೀಮತಿ ಶಾರದಾ ಹಾರ್ಕಜೆ ವಂದಿಸಿದರು.