ನವೀನ್ ಕುಮಾರ್ (ಬಾಬು)ಗೂಡಿಂಜ ರಿಗೆ ಸಾರ್ವಜನಿಕ ಶ್ರದ್ಧಾಂಜಲಿ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ಗೂಡಿಂಜ ನಿವಾಸಿ ಬಾಬು ಯಾನೆ ನವೀನ್ ಕುಮಾರ್ ರವರು ಆ.14 ರಂದು ನಿಧನರಾಗಿದ್ದು, ಮೃತರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಆ.25 ರಂದು ಬಡ್ಡಡ್ಕದಲ್ಲಿರುವ ಲ್ಯಾಂಪ್ಸ್ ಸೊಸೈಟಿ ಸಭಾಭವನದಲ್ಲಿ ನಡೆಯಿತು.
ಮೃತರ ಜೀವನಗಾಥೆಯ ಕುರಿತು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಯವರು ನುಡಿ ನಮನ ಸಲ್ಲಿಸಿದರು.

ಮೃತರ ಪುತ್ರರರಾದ ನೂತನ್ , ನಮನ್ ಹಾಗೂ ಸಹೋದರ ಚಂದ್ರಶೇಖರ ಗೂಡಿಂಜ,ಸಹೋದರಿಯರಾದ ಶ್ರೀಮತಿ ರಾಧಾ ಗೂಡಿಂಜ, ಶ್ರೀಮತಿ ವಿಜಯ ವಿರಾಜಪೇಟೆ ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.