













ಸುಳ್ಯ ಅಂಬಟೆಡ್ಕದಲ್ಲಿರುವ ವೆಹಿಕಲ್ ಕೆಫೆ ಕಾರ್ ಎಕ್ಸಸರಿಸ್ ಮಳಿಗೆಯಲ್ಲಿ ರಿಪೇರಿಗೆಂದು ಇಟ್ಟಿದ್ದ ಬೈಕ್ ಗೆ ರಾತ್ರಿ ವೇಳೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ವರದಿ ಯಾಗಿದ್ದು ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಜ್ಜಾವರ ಗ್ರಾಮದ ಮುಳ್ಯದ ಜಯಪ್ರಕಾಶ್ ಎಂಬವರು ಬೈಕ್ ನ ಲೈಟ್ ಸರಿಪಡಿಸಲು ಇರಿಸಿದ್ದರು. ರಾತ್ರಿ ವೇಳೆ ರೈಟ್ ಕೋಟ್ ಹಾಕಿ ಬಂದ ವ್ಯಕ್ತಿ ಬೈಕ್ ಗೆ ಬೆಂಕಿ ಹಚ್ಚಿದ್ದು ಪರಾರಿಯಾಗಿದ್ದಾರೆ. ಈ ಕುರಿತು ಇನ್ನಷ್ಟು ವಿವರ ತಿಳಿದು ಬರಬೇಕಾಗಿದೆ.






